ವರಕೋಡಿ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರಿನ ಗ್ರಾಮದ ವರಕೋಡಿ ಯಕ್ಷಕಲಾ ಸಂಘ ಇದರ ದಶಪಂಚಮಹೋತ್ಸವ ಸಂದರ್ಭದಲ್ಲಿ ಜ.19ರಂದು ಬೆಳಗ್ಗೆ 7 ಗಂಟೆಗೆ ಗಣಹೋಮ 8.ಗಂಟೆಗೆ” ಶ್ರೀ ಸತ್ಯನಾರಾಯಣ ಪೂಜೆ “ 10ಗಂಟೆಗೆ “ಧಾರ್ಮಿಕ ಸಭಾಕಾರ್ಯಕ್ರಮ” ಸಾಧಕರಿಗೆ ಸನ್ಮಾನ “ ಬಡಗಬೆಳ್ಳೂರು ಗ್ರಾಮದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 500 ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ” ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ,ರಾತ್ರಿ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಜ.19ರಂದು ಭಾನುವಾರ ಮಧ್ಯಾಹ್ನ 12 ರಿಂದ ಯಕ್ಷ ಕಲಾ ಸಂಘದ ಯಕ್ಷಧಾಮ ದಲ್ಲಿ ದೇವದಾಸ್ ಅರ್ಕುಳ ಇವರಿಂದ ತರಭೇತಿ ಪಡೆದ ಮಕ್ಕಳಿಂದ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ “ ರಾತ್ರಿ. 9.30ಕ್ಕೆ ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಯಕ್ಷಗಾನ ಬಯಾಲಾಟ “ಶ್ರೀ ಭಗವತೀ ಮಹಾತ್ಮೆ” ನಡೆಯಲಿದೆ .ಎಂದು ಯಕ್ಷಕಲಾ ಸಂಘದ ಪ್ರಕಟನೆ ತಿಳಿಸಿದೆ.
