ಬಂಟ್ವಾಳ :  ಭಾರತೀಯ ಜನತಾ ಪಾರ್ಟಿ ಬಂಟ್ವಾಳದ ಮಹಿಳಾ ಮೋರ್ಚಾದ ಆಶ್ರಯದಲ್ಲಿ ಭಾರತ ಮಾತಾ ಪೂಜನ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಸಭೆ ಪಕ್ಷದ ಕಛೇರಿಯಲ್ಲಿ ನಡೆಯಿತು. ರಾಜ್ಯ ಬಿ.ಜೆ.ಪಿ ಸಹವಕ್ತಾರೆ ಶ್ರೀಮತಿ ಸುಲೋಚನಾ ಜಿ.ಕೆ ಭಟ್ ರವರು ಮಾತನಾಡುತ್ತಾ ಪೌರತ್ವ ತಿದ್ದುಪಡಿ ಕಾಯ್ದೆ ರಾಷ್ಟ್ರ ಹಿತದ ಕಾಯ್ದೆ ಈ ಕಾಯ್ದೆಯಿಂದ ಈ ದೇಶದ ಯಾವುದೇ ಧರ್ಮದ ನಾಗರಿಕರಿಗೆ ತೊಂದರೆಯಾಗುವುದಿಲ್ಲಾ ಇದು ಪೌರತ್ವ ಕೊಡುವ ಕಾಯ್ದೆಯ ಹೊರತು ಕಿತ್ತುಕೊಳ್ಳುವ ಕಾಯ್ದೆ ಅಲ್ಲ ಎಂದು ಹೇಳಿದರು.

IMG_20200113_121025 (1)
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಂಗಳೂರಿನಲ್ಲಿ 19ರಂದು ನಡೆಯುವ ಅಮಿತ್ ಶಾ ಕಾರ್ಯಕ್ರಮದ ಮಾಹಿತಿ ನೀಡಿದರು. ಮಹಿಳಾ ಮೋರ್ಚಾದ ಕಡೆಯಿಂದ ಮನೆ ಸಂಪರ್ಕ ಮಾಡುವ ಬಗ್ಗೆ ಯೋಜನೆ ತಯಾರಿಸಲಾಯ್ತು. ನಳಿನಿ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಜಯಂತಿ, ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಭಾರತಿ ಚೌಟ ಹಾಗೂ ನೂರಾರು ಸಂಖ್ಯೆಯಲ್ಲಿ ಗ್ರಾ.ಪಂ ಸದಸ್ಯರು, ಪುರಸಭಾ ಸದಸ್ಯರು ಹಾಗೂ ಮಹಿಳಾ ಮೋರ್ಚಾದ ಸದಸ್ಯರು ಸೇರಿದ್ದರು. ಮಣಿಮಾಲ ಶೆಟ್ಟಿ ನಿರೂಪಿಸಿ ಪ್ರಸ್ತಾವಿಸಿದರು ಮಹಿಳಾ ಮೋರ್ಚಾದ ರೇಣುಕಾ ರೈ ಧನ್ಯವಾದ ಸಮರ್ಪಿಸಿದರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.

By suddi9

Leave a Reply

Your email address will not be published. Required fields are marked *