downloadಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾ.30ರಂದು ನಡೆಯಲಿರುವ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಕಟೀಲು ದೇಗುಲ ಮತ್ತು ಪರಿಸರದಲ್ಲಿ ಮಾಯೆಯ ಇಚ್ಚೆಯಂತೆ ಜನಮನದಲ್ಲಿ ಎಣಿಸಿಯೇ ಇರದಂತೆ ವೇಗವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಂದಿನೀ ನದಿಯ ಮಧ್ಯೆ ಇರುವ ದ್ವೀಪ ದೇವಸ್ಥಾನ ಆಗಿರುವುದರಿಂದ ಕಟೀಲು ದೇಗುಲದ ಒಳಗೆ ಸ್ಥಳಾವಕಾಶ ಕಡಿಮೆ ಇದೆ. ಹಾಗಾಗಿ ಹೆಚ್ಚು ಜನ ಬಂದಾಗ ಎರಡು ಪುಟ್ಟ ಸೇತುವೆಗಳಿದ್ದರೂ ಸರಾಗ ಓಡಾಟಕ್ಕೆ ಕಷ್ಟವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹೊಸದಾಗಿ ಕಬ್ಬಿಣದ ಸೇತುವೆ ಸುಮಾರು ರೂ. 15ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಪುತ್ತೂರಿನ ಮಾಸ್ಟರ್ ಪ್ಲಾನರಿಯವರು ಕಾಂಕುಡ್ ಅಳವಡಿಸಿ ಸೇತುವೆ ನಿರ್ಮಿಸುತ್ತಿದ್ದು, ದೇಗುಲಕ್ಕೆ ಹೋಗಲು ಮೂರು ಸೇತುವೆಗಳ ನಿರ್ಮಾಣವಾದಂತಾಗಿದೆ. ಬೆಳ್ಳಿ ರಥದ ಕೊಠಡಿ ಹಾಗೂ ದೇಗುಲದ ಕಚೇರಿಯ ಒಂದು ಭಾಗವನ್ನು ಒಡೆದು, ಅಲ್ಲಿ ಸರಾಗ ಓಡಾಟಕ್ಕೆ ಅನುಕೂಲವಾಗುವಂತೆ ಈ ಹೊಸದಾದ ಸೇತುವೆ ನಿರ್ಮಾಣವಾಗಿದೆ.nhj

*  ಅನ್ನ ಸಂತರ್ಪಣೆ ವ್ಯವಸ್ಥೆಗೆ ಸಕಲ ಸಿದ್ದತೆ

ಕಟೀಲು ಸಿತ್ಲ ಬೈಲಿನಲ್ಲಿ ಸುಮಾರು ಒಂದು ಲಕ್ಷ ಚದರ ಅಡಿ ವಿಸ್ತಾರದ ಈ ತಗಡು ಹಾಸು ಚಪ್ಪರದಲ್ಲಿ ಸುಮಾರು 2000 ಸಾವಿರ ಜನ ಕುಳಿತಿಕೊಂಡು ಊಟ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. 10 ಕಡೆಗಳಲ್ಲಿ 20 ಬಪೆ ಕೌಂಟರ್ ಗಳನ್ನು ಅಳವಡಿಸಲಾಗುತ್ತಿದ್ದು ಅಲ್ಲಲ್ಲಿ ಕುಡಿಯುವ ಶುದ್ದ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಊಟದ ಸಂದರ್ಭ ಹೆಚ್ಚಿನ ಜನ ಸಂದಣಿ ಇದ್ದರೆ. ಜನಸಂದಣಿ ಕಡಿಮೆ ಆಗುವವರೆಗೆ ಭಕ್ತರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿದಿನ ಊಟ ಮತ್ತು ಫಲಹಾರಕ್ಕೆ ಒಂದೂಂದು ಸಿಹಿ ತಿಂಡಿ ನೀಡಲಾಗುತ್ತಿದೆ. ಜ. 19 ರಂದು ಅಡುಗೆ ಕೋಣೆಯಲ್ಲಿ ಗಣಹೋಮ ಪೂಜೆ, ಜ. 20 ರಂದು ಕೊಪ್ಪರಿಗೆ ಇಡಲಾಗುವುದು. ಅಡುಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಸಿತ್ಲ ಬೈಲಿನಲ್ಲಿ ಎರಡು ಬಾವಿ ನೀರನ್ನು ಎನ್‍ಐಟಿಕೆಯಲ್ಲಿ ಪರೀಕ್ಷೆ ಮಾಡಿ ಉಪಯೋಗಿಸಬಹುದು ಎಂದು ದೃಢ ಪಟ್ಟಿದೆ.

* ಉದ್ಘಾಟನೆಗೆ ಮೈಸೂರು ಅರಸರು
ತಾ.22ರಂದು ಬೆಳಿಗ್ಗೆ ಬ್ರಹ್ಮಕಲಶೋತ್ಸವಾಂಗ ತೋರಣ ಮುಹೂರ್ತ, ದೊಡ್ಡ ಹೊರೆಕಾಣಿಕೆ ಬಂದು ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮೈಸೂರಿನ ಅರಸರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ.

* ದೇಗುಲಕ್ಕೆ ಬಂದವರಿಗೆಲ್ಲ ಬಗೆಬಗೆಯ ಸಿಹಿ ಪ್ರಸಾದ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜನವರಿ 22ರಿಂದ ಫೆಬ್ರವರಿ 3ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ದಿನಗಳಲ್ಲಿ ದೇವಳಕ್ಕೆ ಹತ್ತರಿಂದ ಹದಿನೈದು ಲಕ್ಷ ಮಂದಿ ಭಕ್ತರು ಭೇಟಿ ನೀಡುವ ಸಾಧ್ಯತೆ ಇದ್ದು, ಜ. 22 ರಿಂದ ಫೆ. 3 ರತನಕ ದೇವಸ್ಥಾನಕ್ಕೆ ಬೇಟಿ ನೀಡಿದ ಭಕ್ತಾಧಿಗಳಿಗೆ ವಿಶೇಷ ಸಿಹಿ ಪ್ರಸಾದ ನೀಡುವ ಯೋಜನೆ ಸಿದ್ದಗೊಂಡಿದೆ. ಇದಕ್ಕೆ ಪ್ರತ್ಯೇಕ ಕೌಂಟರ್ ಮಾಡಲಾಗುವುದು. ಪ್ರತಿನಿತ್ಯ ಬೇರೆ, ಬೇರೆ ರೀತಿಯ ಸಿಹಿ ಪ್ರಸಾದ ನೀಡುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುವುದು.

ಬೆಂಗಳೂರಿನ ಬಂಟ್ವಾಳ ಉದ್ಯಮಿ, ಸಾಲಿಗ್ರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಸೋಮಯಾಜಿ ಅವರು ಈ ಸಿಹಿ ಪ್ರಸಾದ ಪ್ರಯೋಜತ್ವವನ್ನು ವಹಿಸಿಕೊಂಡಿದ್ದಾರೆ. ಅಲ್ಲದೆ ಅವರು ದೇವಸ್ಥಾನದ ಮೇಲಿನ ಛಾವಣಿಗೆ ಆಕರ್ಷಕವಾದ ಅತ್ಯಧುನಿಕ ತಂತ್ರಜ್ಞಾನನ ವ್ಯವಸ್ಥೆಯಳ್ಳ ತಂಪು ನೀಡಬಲ್ಲ ಪಬ್ ಶೀಟ್‍ನ ಅಳವಡಿಸುವ ಸೇವೆ ಮಾಡಿಕೊಟ್ಟಿದ್ದಾರೆ

By suddi9

Leave a Reply

Your email address will not be published. Required fields are marked *