ಉಡುಪಿ :  ರಕ್ತದಾನ ಅತ್ಯಂತ ಶ್ರೇಷ್ಟ ದಾನವಾಗಿದ್ದು,ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಂಡರೆ ನಮ್ಮ ಜೀವನಸಾದರ್ಥವಾಗಲು ಸಾದ್ಯ ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾದ್ಯಕ್ಷ ವಿನಯ ಕರ್ಕೆರ ತಿಳಿಸಿದರು. ಅವರು ಜ.12 ರಂದು ಬ್ರಹ್ಮಾವರ ಎಸ್.ಎಮ್.ಎಸ್ ಕಾಲೇಜಿನಲ್ಲಿ ಕೆ.ಎಂ.ಸಿ ಮಣಿಪಾಲ ರಕ್ತನಿಧಿ,ಸಾಮಾನ್ಯ ಆರೋಗ್ಯ ವಿಭಾಗ ದ ಸಹಯೋಗದಲ್ಲಿ ಆಸರೆ ಹೆಲ್ಪಿಂಗ್ ಹ್ಯಾಂಟ್ ಉಡುಪಿ,ಮೊಗವೀರ ಯುವ ಸಂಘಟನೆ ಬ್ರಹ್ಮಾವರ,ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಡೆದ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

IMG-20200112-WA0006

ವೀದಿಕೆಯಲ್ಲಿ ನಿಯೋಜಿ ಜಿಲ್ಲಾ ಮುಗವೀರ ಯುವ ಸಂಘಟನೆ ಅದ್ಯಕ್ಷ ಶಿವರಾಮ ಕೆ.ಎಂ,ಬ್ರಹ್ಮಾವರ ಘಟಕದ ಪ್ರವೀಣ್ ಆಮೀನ್,ಸಲಹೆಗಾರ ಕಿಟ್ಟಪ್ಪ,ನಿವೃತ್ತ ಸೈನಿಕ ಸಾಧು ಕುಂದರ್,ಕಾರ್ಯದರ್ಶಿ ದಿನೇಶ್,ಮಣಿಪಾಲ ಕೆ,ಎಂ.ಸಿ ವೈದ್ಯರಾದ ಡಾ|| ಪ್ರವೀಣ್ ಸ್ಯಾಮವೆಲ್,ಡಾ|| ದಿಪೀಕಾ ಮುಂತಾದವರಿದ್ದರು.ಆಸರೆ ಸಂಸ್ಥೆಯ ಮುಖ್ಯಸ್ಥರಾದ ಡಾ|| ಕೀರ್ತಿ ಪಾಲನ್ ಸ್ವಾಗತಿಸಿದರು.ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *