ಬಂಟ್ವಾಳ: ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಆಂಗ್ಲಭಾಷಾ ವಿಭಾಗದಿಂದ, ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶ್ರೀಜ ಅವರು ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಶುಭಹಾರೈಸಿದರು. ಇದೇವೇಳೆ ಡಾ.ಟಿ.ಕೆ. ರವೀಂದ್ರನ್ ಅವರ ತುಳುವಿನಿಂದ ಆಂಗ್ಲಭಾಷೆಗೆ ಅನುವಾದಿಸಿದ ಕೃತಿಯೊಂದನ್ನು ಅನಾವರಣಗೊಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರಿಪ್ರಸಾದ್.ಬಿ. ಶೆಟ್ಟಿ ಅವರು ಕೃತಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿ, ಮನುಷ್ಯ ಪ್ರಕೃತಿಯೊಂದಿಗೆ ಹೇಗೆ ಹೊಂದಿಕೊಂಡು ಬದುಕಬೇಕು ಎಂದು ಈ ಕಾದಂಬರಿ ಸಾರುತ್ತದೆ ಎಂದು ಅಭಿಪ್ರಾಯಪಟ್ಟರಲ್ಲದೆ ತುಳುವಿನಿಂದ ಆಂಗ್ಲಭಾಷೆಗೆ ಕೃತಿಗಳನ್ನು ಅನುವಾದ ಮಾಡುವುದು ಒಂದು ಅಮೂಲ್ಯ ಕೊಡುಗೆಯಾಗುತ್ತದೆ ಎಂದು ವಿಶ್ಲೇಷಿಸಿದರು.
ಡಾ.ಶ್ರೀಜ ಅವರು ವಿಶ್ವವಿದ್ಯಾನಿಲಯವು ಪಠ್ಯಕ್ರಮದಲ್ಲಿನಿಗದಿಪಡಿಸಲಾದ ಕಾದಂಬರಿಗಳ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ವೇದಿಕೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ವಿದ್ಯಾ.ಕೆ.ಎಸ್., ಐಕ್ಯೂ.ಎ.ಸಿ ಸಂಯೋಜಕ ಡಾ.ರವಿ.ಎಂ.ಎನ್ ಉಪಸ್ಥಿತರಿದ್ದರು.
ಮಾಯಾಇಂದ್‌ವಾರ್ ಸ್ವಾಗತಿಸಿ, ಬಿಶಾಲ್‌ಕರ್‌ಹಾರ್ ವಂದಿಸಿದರು. ಕೆ.ಶ್ವೇತಾ ನಾಯಕ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಜೋಲನ್ ಕಾರ್ಯಕ್ರಮ ನಿರೂಪಿಸಿದರು.

