ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವು ನಡೆಯಿತು. “ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಇದನ್ನು ಉದ್ದೀಪನಗೊಳಿಸುವವರು ಶಿಕ್ಷಕರು.ಇಲ್ಲಿರುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ. ಶ್ರೀರಾಮ ಶಾಲೆಯಲ್ಲಿನ ಶಿಸ್ತಿನ ಪಾಠ, ಸಂಸ್ಕ್ರತಿ    – ಸಂಸ್ಕಾರ, ಪ್ರಾರ್ಥನೆ ಕಣ್ತುಂಬಿಕೊಳ್ಳಲು ಸಂತೋಷವಾಯಿತು.” ಎಂದು ಗೋಳ್ತಮಜಲು ಗ್ರಾಮ ಪಂಚಾಯತ್‍ನ ಪಿ.ಡಿ.ಓ ಆಗಿರುವಂತಹ ಶಿವಾನಂದ ಪೂಜಾರಿ ನುಡಿದರು.

IMG-20200104-WA0025

IMG-20200104-WA0031

ಕಾರ್ಯಕ್ರಮದಲ್ಲಿ ಅತಿಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಪುಷ್ಪಗುಚ್ಛ ನೀಡಿ ಅತಿಥಿಗಳನ್ನು ಸಾಂಕೇತಿಕವಾಗಿ ಸ್ವಾಗತಿಸಲಾಯಿತು. ಗೋಳ್ತಮಜಲು ಗ್ರಾಮ ಲೆಕ್ಕಾಧಿಕಾರಿಯಾದ ಜನಾರ್ಧನ್ಮಾ ತನಾಡುತ್ತಾ, “ಇಂದಿನ ಸಂಸ್ಕ್ರತಿ – ಪರಂಪರೆಯನ್ನು ಉಳಿಸಿಕೊಳ್ಳುವ ಕಾರ್ಯ ಈ ಸಂಸ್ಥೆ ಮಾಡುತ್ತಿದೆ. ತಮ್ಮ ಪ್ರತಿಭೆಯ ಮೂಲಕ ಉನ್ನತಮಟ್ಟಕೆ ಏರಿ. ಉತ್ತಮ ಪ್ರಜೆಯಾಗಿ, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಿರಿ” ಎಂದು ಶುಭ ಹಾರೈಸಿದರು.

IMG-20200106-WA0031

IMG-20200106-WA0033

IMG-20200106-WA0026

ನೃತ್ಯಭಜನೆ, ನಾಟಕ, ಪೂಕಳಂ, ಶಂಖನಾದ, ಕಸದಿಂದ ರಸ, ಆಶುಭಾಷಣ, ಏಕಪಾತ್ರಾಭಿನಯ, ಕವನ ರಚನೆ ಇತ್ಯಾದಿ ಬೌದ್ಧಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಅಧ್ಯಾಪಕರಾದ ಲಕ್ಷ್ಮೀ ಹಾಗೂ ನವ್ಯಶ್ರೀ ಬಹುಮಾನ ವಾಚಿಸಿದರು. ತದನಂತರ ಹಗ್ಗಜಗ್ಗಾಟ, ರಿಲೆ, ಹರ್ಡ್‍ಲ್ಸ್, ಓಟ, ಗುಂಡೆಸೆತ, ಚಕ್ರ ಎಸೆತ, ಉದ್ದಜಿಗಿತ ಇತ್ಯಾದಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

IMG-20200106-WA0023

IMG-20200104-WA0006

IMG-20200106-WA0025

ಇದನ್ನು ಶಿಕ್ಷಕಿಯಾದ ಸೌಮ್ಯ ವಾಚಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಬಾಳ್ತಿಲ ಗ್ರಾಮ ಪಂಚಾಯತ್‍ನ ಪಿ.ಡಿ.ಓ ಆದಂತಹ ಸಂದ್ಯಾ ಕೋಡಿಕಲ್, ಗೋಳ್ತಮಜಲು ಗ್ರಾಮ ಸಹಾಯಕರಾದ ಮೋಹನ್‍ದಾಸ್ಕೊ ಟ್ಟಾರಿ, ಕಲ್ಲಡ್ಕ ಕ್ವಾಲಿಟಿ ಸ್ವೀಟ್ಸ್‍ನ ಮಾಲಕರಾದ ವಿಶ್ವನಾಥ , ಭಾರತೀಯ ಜೀವವಿಮಾ ನಿಗಮದ ಗಂಗಾಧರ್, ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ರಕ್ಷಿತಾ ನಿರೂಪಿಸಿ, ಸುಮಂತ್ ಆಳ್ವ ಸ್ವಾಗತಿಸಿ, ಅನ್ನಪೂರ್ಣ ವಂದಿಸಿದರು

By suddi9

Leave a Reply

Your email address will not be published. Required fields are marked *