ಬಂಟ್ವಾಳ: ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿ ಪೊಲೀಸ್ ಅಧೀಕ್ಷಕರಾಗಿ ಭಡ್ತಿಗೊಂಡು ಬೆಂಗಳೂರು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಗೊಂಡ ಸೈದುಲು ಅಡಾವತ್ ಅವರಿಗೆ ಕಚೇರಿ ಸಿಬ್ಬಂದಿಗಳಿಂದ ಅಭಿನಂದನೆ ಹಾಗೂ ಬೀಳ್ಕೊಡುಗೆ ಸರಳ ಸಮಾರಂಭ ಕಚೇರಿಯಲ್ಲಿಯೇ ನಡೆಯಿತು. ಈ ಸಂದರ್ಭದಲ್ಲಿ ಎಎಸ್ಐಗಳಾದ ಸಂಜೀವ, ವಿಜಯೇಶ್ವರನ್, ಹೆಡ್ ಕಾನ್ಸ್‌ಟೇಬಲ್ ಗಳಾದ ವಿಜಯಕುಮಾರ್, ಸೀತರಾಮ್, ಅಬ್ದುಲ್ ಕರೀಂ, ಸತೀಶ್, ಪ್ರಶಾಂತ್, ಉದಯ ರೈ, ಗೃಹರಕ್ಷಕ ಸಿಬ್ಬಂದಿ ಕಿಶನ್ ಕುಮಾರ್ ರವರು ಉಪಸ್ಥಿತರಿದ್ದರು.
ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಸೂಕ್ಷ್ಮ ಪ್ರದೇಶದಲ್ಲಿ ಶಾಂತಿಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ಸು ಕಂಡಿರುವ ಸೈದುಲ್ ಅವರು ತನ್ನ ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಯೋಗಕ್ಷೇಮದ ಬಗ್ಗೆಯು ಚಿಂತಿಸಿ ಕಡ್ಡಾಯವಾಗಿ ವಾರದ ರಜೆಯನ್ನು ಜ್ಯಾರಿಗೆ ತಂದಿದ್ದಲ್ಲದೆ, ಸಿಬ್ಬಂದಿಗಳು ತಮ್ಮ ಸೀಮಿತ ವೇತನದಲ್ಲಿ ಹೇಗೆ ಉಳಿತಾಯ ಮಾಡಬೇಕೆಂದು ಸಲಹಾ ಕಾರ್ಯಗಾರವನ್ನು ನಡೆಸಿಕೊಟ್ಟಿದ್ದರು. ಇದೀಗ ಅವರು ಬೆಂಗಳೂರು ಲೋಕಾಯುಕ್ತ ಕಚೇರಿಗೆ ಎಸ್.ಪಿ.ಯಾಗಿ ಭಡ್ತಿಗೊಂಡು ವರ್ಗಾವಣೆಗೊಂಡಿದ್ದಾರೆ. ಡಿವೈಎಸ್ಪಿ ಗ್ರೇಡ್ : ಇದೀಗ ಬಂಟ್ವಾಳ ಉಪವಿಭಾಗ ವನ್ನು ಡಿವೈಎಸ್ಪಿ ಗ್ರೇಡ್ ನ್ನಾಗಿಸಲಾಗಿದ್ದು,ಎಎಸ್ಪಿ ಹುದ್ದೆ ಯಿಂದ ತೆರವಾದ ಬಂಟ್ವಾಳ ಉಪವಿಭಾಗಕ್ಕೆ ಡಿವೈಎಸ್ಪಿ ವೆಲಂಟಿನ್ ಡಿಸೋಜ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಈ ಜಿಂದೆ ಇವರು ಇಲ್ಲಿ ವೃತ್ತ ನಿರೀಕ್ಷಕರಾಗಿಯು ಕಾರ್ಯ ನಿರ್ವಹಿಸಿದ್ದರು.

