ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಶಾಂತಿನಗರ ನಮ್ಮ ಫ್ರೆಂಡ್ಸ್ ಬಳಗದ 21ನೇ ವಾರ್ಷಿಕೋತ್ಸವವು  ಬುಧವಾರ ಸಂಜೆ  ಶಾಂತಿನಗರ ಶಾಲೆಯ ಮಿತ್ತಕಟ್ಟ ದಿ.ವೀರಪ್ಪ ಪೂಜಾರಿ ವೇದಿಕೆಯಲ್ಲಿ  ನಡೆಯಿತು.   ಶ್ರೀ ಸತ್ಯನಾರಾಯಣ ಪೂಜೆಯ ಪ್ರಯುಕ್ತ ನಡೆದ  ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಸಜೀಪ ಜನ ಸೇವಾ ಟ್ರಸ್ಟ್’ನ ಅಧ್ಯಕ್ಷ ಯಶವಂತ ದೇರಾಜೆ ಉದ್ಘಾಟಿಸಿ ಶುಭ ಹಾರೈಸಿದರು.

IMG-20200102-WA0038  ಸಜೀಪ ಶ್ರೀ ದುರ್ಗಾಪರಮೇಶ್ವರಿ ಭಕ್ತ ವೃಂದದ  ಅಧ್ಯಕ್ಷ ನವೀನ್ ಸುವರ್ಣ ಮಿತ್ತಕಟ್ಟ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಸಚಿನ್ ಮೆಲ್ಕಾರ್, ಪಾಣೆಮಂಗಳೂರು ರೈ. ಸೇ. ಸ.ಬ್ಯಾಂಕಿನ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸಜೀಪ ಮಾಗಣೆ ತಂತ್ರಿಗಳಾದ ಸುಬ್ರಹ್ಮಣ್ಯ ಭಟ್, ಸಜೀಪ ಮೂಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ದಾಮೋದರ ಪಂಡಿತ್ ಕಲ್ಲಡ್ಕ, ಸಂಸ್ಥೆಯ ಸ್ಥಾಪಕರಾದ ಎಸ್.ಕೆ ಸದಾನಂದ ಸುವರ್ಣ, ವಿಟ್ಲ ತಾಲೂಕು ಸಾಮರಸ್ಯ ಪ್ರಮುಖರಾದ ಲೋಹಿತ್ ಪಣೋಲಿಬೈಲು, ಸಿವಿಲ್ ಇಂಜಿನಿಯರ್ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ವಿಶ್ವನಾಥ ಪೂಜಾರಿ ಮರ್ತಾಜೆ, ಉದ್ಯಮಿ ಪುರುಷೋತ್ತಮ ಪೂಜಾರಿ ಮಿತ್ತಕಟ್ಟ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಸುಮಿತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುಪ್ರಭ ಬಾಸ್ರಿತ್ತಾಯ ಸ್ವಾಗತಿಸಿದರು.
ಪ್ರಶಾಂತ್ ಕಂದೂರ್ ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ದ.ಕ.ಜಿ.ಪ.ಕಿ.ಪ್ರಾಥಮಿಕ ಶಾಲಾ ಮಕ್ಕಳ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

 

By suddi9

Leave a Reply

Your email address will not be published. Required fields are marked *