ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡು ಗಾಣದಪಡ್ಪು ಬಳಿಯ ಮೈದಾನದಲ್ಲಿ ಆಯೋಜಿಸಲ್ಪಟ್ಟಿದ್ದ ಕರಾವಳಿ ಕಲೋತ್ಸವದ ಸಮಾರೋಪ ಸಮಾರಂಭ ಬುಧವಾರ ರಾತ್ರಿ ನಡೆಯಿತು.
ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಉದ್ಯಮಿ ಸಂಜೀವ ಪೂಜಾರಿ, ಸ್ವಾಗತ ಸಮಿತಿ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ರಿಯಾಲಿಟಿ ಶೋ ಖ್ಯಾತಿಯ ಹಾಡುಗಾರರಾದ ಅಖಿಲ ಪಜಿಮಣ್ಣು, ಕೀರ್ತನ್ ಹೊಳ್ಳ, ಕೃತಿ ಕೆ.ರೈ ಉಪಸ್ಥಿತರಿದ್ದರು.

DSC_6271
ಹಿರಿಯ ರಂಗಕರ್ಮಿ ರಮೇಶ್ ರೈ ಕುಕ್ಕುವಳ್ಳಿ ಅವರು ನಾಟಕ ಸ್ಪರ್ಧೆ, ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಮಂಚಿ ಅವರು ಚಿತ್ರಕಲಾ ಸ್ಪರ್ಧೆ, ತೀರ್ಥಪ್ರಸಾದ್ ಅವರು ಸಂಗೀತ ಸ್ಪರ್ಧೆ, ರಾಜೇಶ್ ಕಣ್ಣೂರು ಅವರು ಡ್ಯಾನ್ಸ್ ಸ್ಪರ್ಧೆ ಹಾಗೂ ಮನಮ್ ಪಾಣಿಕ್ಕರ್ ಅವರು ಚೆಂಡೆ ಸ್ಪರ್ಧೆಯ ಫಲಿತಾಂಶ ಘೋಷಿಸಿದರು. ವಿಜೇತರಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು.                  ಕೊಯಿಲ ಪ್ರಥಮ,ಪುಂಜಾಲಕಟ್ಟೆ ದ್ವಿತೀಯ:
ತಾಲೂಕು ಮಟ್ಟದಲ್ಲಿ ನಡೆದ ತುಳು ನಾಟಕ ಸ್ಪರ್ಧೆಯಲ್ಲಿ ತೆಲಿಕೆದ ಕಲಾವಿದೆರ್ ಕೊಯಿಲ ಪ್ರಥಮ, ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ದ್ವಿತೀಯ ಹಾಗೂ ಮಾನಸ ಕಲಾವಿದೆರ್ ಫರಂಗಿಪೇಟೆ ತೃತೀಯ ಬಹುಮಾನ ಪಡೆಯಿತು.  ಹಾಗೆಯೇ ರಂಗಭೂಮಿ ಕಲಾವಿದರ್ ಬಿ.ಸಿ.ರೋಡ್ ಶಿಸ್ತುಬದ್ದ ತಂಡ ಪ್ರಶಸ್ತಿಗೆ ಪಾತ್ರವಾದರೆ,ತೆಲಿಕೆದ ಕಲಾವಿದೆರ್ ಕೊಯಿಲ ತಂಡದ ಮನಿಷ್ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದ ಪ್ರಶಸ್ತಿ ಮತ್ತು  ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ತಂಡದ ರಾಘವೇಂದ್ರ ಕಾರಂತ್ ಮೊಗರ್ನಾಡ್ ಅವರು ಉತ್ತಮ ನಿರ್ದೇಶನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದೇವೇಳೆ ಕಲೋತ್ಸವದ ವಿವಿಧ ಸ್ಪರ್ಧೆಗಳ ತೀರ್ಪುಗಾರರು, ಯಶಸ್ವಿಗೆ ಸಹಕರಿಸಿದವರನ್ನು ಗೌರವಿಸಲಾಯಿತು. ರಮೇಶ್ ರೈ ಕುಕ್ಕುವಳ್ಳಿ,ಜೀವನ್ ಉಳ್ಳಾಲ,ಅರಣ್ ಶೆಟ್ಟಿ ಪೇಜಾವರ ತೀರ್ಪುಗಾರರಾಗಿ ಸಹಕರಿಸಿದ್ದರು.
ಟ್ರಸ್ಟ್ ನ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಪ್ರಸ್ತಾವನೆಗೈದು ಮುಂದಿನ ಕರಾವಳಿ ಕಲೋತ್ಸವದ ದಿನಾಂಕ ಘೋಷಿಸಿದರು. ಕಲೋತ್ಸವದ ಗೌರವಾಧ್ಯಕ್ಷ ಜಯರಾಮ ರೈ ಸ್ವಾಗತಿಸಿದರು. ಲೋಕೇಶ್ ಸುವರ್ಣ ಹಾಗೂ ಗೋಪಾಲ ಅಂಚನ್ ನಿರೂಪಿಸಿದರು. ಸಮಾರೋಪಕ್ಕೆ ಮೊದಲು ಚೆಂಡೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

By suddi9

Leave a Reply

Your email address will not be published. Required fields are marked *