ಮಂಗಳೂರು: ಮಂಗಳೂರಿನಲ್ಲಿ ಡಿ.19ರಂದು ನಡೆದ ಗೋಲಿಬಾರ್ ವಿರೋಧಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಮಂಗಳೂರಿನ ಪುರಭವನದ ಮುಂಭಾಗ ಧರಣಿ ನಡೆಸುತ್ತಿದ್ದರೆ. ಇನ್ನು ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿರುವ ಪ್ರಗತಿಪರ ಸಂಘಟನೆಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಗೋಲಿಬಾರ್ ನಂತರ ಜಿಲ್ಲೆಯಲ್ಲಿ ಇದೇ ಮೊದಲ ಧರಣಿ ಆಗ್ತಾ ಇರುವುದು. ರ್ಯಾಲಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳು ಧರಣಿ ಮಾಡ್ತಾ ಇದ್ದಾರೆ. ಇನ್ನು ಧರಣಿಯಲ್ಲಿ ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಅಭಯಚಂದ್ರ ಜೈನ್, ಪರಿಷತ್ ಸದಸ್ಯ ಐವನ್ ಡಿಸೋಜ ಭಾಗಿಯಾಗಿ ಸಿಎಎ, ಏನ್ ಆರ್ ಸಿ ವಿರುದ್ಧ ಕಿಡಿಕಾರಿದ್ರು. ಇಂದು ಇಡೀ ದಿನ ಧರಣಿ ನಡೆಯಲಿದೆ.

ಇನ್ನು ಧರಣಿಯಲ್ಲಿ ಮಾತನಾಡಿದ ಮುಖಂಡರು, ಘಟನೆಯಲ್ಲಿ ಅಮಾಯಕರ ಬಂಧನವಾಗಿದೆ, ಅವರನ್ನ ತಕ್ಷಣ ಬಿಡುಗಡೆಗೊಳಿಸಬೇಕು. ಗೋಲಿಬಾರ್ ನಲ್ಲಿ ಮೃತರಾದವರ ಕುಟುಂಬಕ್ಕೆ ನೀಡಿದ್ದ ಪರಿಹಾರ ವಾಪಾಸ್ ಪಡೆಯಲಾಗಿದೆ. ಇದು ಸರಿಯಲ್ಲ. ಈ ಕೂಡಲೇ ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಇನ್ನು ಘಟನೆ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ನಮಗೆ ಮ್ಯಾಜಿಸ್ಟ್ರೇಟ್ ತನಿಖೆ ಬೇಡ, ನ್ಯಾಯಾಂಗ ತನಿಖೆಯೇ ನಡೆಯಬೇಕು ಎಂದು ಧರಣಿ ನಿರತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ರು


