ಮಂಗಳೂರು : ಮಂಗಳೂರಿನ ಬೋಳಾರದಲ್ಲಿ1901ರಲ್ಲಿ ಕಟ್ಟಿಸಲ್ಪಟ್ಟಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯ ಮೊದಲ ಮಠವನ್ನುಇದೇಡಿಸೆಂಬರ್29,2019 ರಂದು ಪಾರಂಪಾರಿಕತಾಣವಾಗಿಉದ್ಘಾಟಿಸಲಾಯಿತು. ಕಳೆದ ಒಂದು ವರ್ಷದಿಂದ ಈ ಪಾರಂಪಾರಿಕತಾಣದ ಮೂಲ ಸ್ವರೂಪಕ್ಕೆಧಕ್ಕೆ ಬಾರದಂತೆಅದನ್ನುಅಭಿವೃದ್ಧಿ ಪಡಿಸಲು ಹಲವು ಯೋಜನೆಗಳು ರೂಪುಗೊಂಡಿದ್ದವು. ಮುಂದಿನ ಪೀಳಿಗೆಯವರಿಗೆ ಆದರ್ಶವಾಗುವರೀತಿಯಲ್ಲಿ ಸಂಪೂರ್ಣ ಸಿದ್ಧಗೊಂಡು ಡಿಸೆಂಬರ್29, 2019ರಂದು ಮಂಗಳೂರಿನ ಧರ್ಮಾಧ್ಯಕ್ಷರಾದಅತೀ ವಂóದನೀಯಬಿಷಪ್ಪೀಟರ್ ಪೌಲ್ ಸಲ್ಡಾನಾರವರ ಶ್ರೀ ಹಸ್ತದಿಂದ ಆಶೀರ್ವದಿಸಲ್ಪಟ್ಟು ,ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಂಸ್ಥೆಯ ಮಹಾಮಾತೆಯರಾದ ವಂದನೀಯ ಸುಶೀಲಾ ಸಿಕ್ವೇರಾರವರಿಂದ ಈ ‘ಪಾರಂಪರಿಕತಾಣ’ವು ಲೋಕಾರ್ಪಣೆಗೊಂಡಿತು.

ಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯು1887ರಎಪ್ರೀಲ್10ರಂದು ಮಂಗಳೂರು ರೊಜಾರಿಯೊ ಮಹಾದೇವಾಲಯದ ಪ್ರಥಮಗುರು ವಂದನೀಯಉರ್ಬನ್ ಸ್ಟೈನ್ಜೆ.ಸ. ಇವರಿಂದ ಸ್ಥಾಪಿಸಲ್ಪಟ್ಟಿತು. ದಕ್ಷಿಣಕನ್ನಡಜಿಲ್ಲೆಯ ಭಾರತೀಯ ಪ್ರಥಮಡೆಪ್ಯೂಟಿಕಲೆಕ್ಟ್ರ್ ಶ್ರೀಮಾನ್ ಜೋನ್ ಫ್ರ್ರಾನ್ಸಿಸ್ ಫೆರ್ನಾಂಡಿಸ್ಇವರಪುತ್ರಿ ನಿಂಫಾ ಫೆರ್ನಾಂಡಿಸ್ರವರುಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯ ಪ್ರಥಮ ಮಾತೆಯಾದರು. ಅವರೊಂದಿಗೆಇನ್ನು11 ಸಹಯೋಗಿಗಳು ಸಂಸ್ಥೆಯ ಪ್ರಥಮ ಸದಸ್ಯರಾದರು.ತಮ್ಮ ಮನೆಗಳಲ್ಲಿಯೇ ವಾಸಿಸುತ್ತಿದ್ದ ಇವರಿಗೆತಮ್ಮಕಾರ್ಯ ಚಟುವಟಿಕೆಗಳನ್ನು ನಡೆಸಲುಒಂದುಕ್ಷೇತ್ರದಅಗತ್ಯವಿದ್ದು ಈ ಉದ್ದೇಶ ನೆರವೇರಿಸುವ ಸಲುವಾಗಿ 1901ರಲ್ಲಿ ಸಂತಅರ್ಸುಲಾ ಮಠವನ್ನು ಮದರ್ ನಿಂಫಾ ಫೆರ್ನಾಂಡಿಸ್ರವರು ಕಟ್ಟಿಸಿದರು.
ಸಂಸ್ಥೆಯ ಸಂಸ್ಥಾಪನಾ ಗುರು ವಂದನೀಯಉರ್ಬನ್ ಸ್ಟೈನ್ಜೆ.ಸ. ಇವರು ನವಂಬರ್21,1888ರಲ್ಲಿ ಸ್ವರ್ಗಸ್ಥರಾಗಲು, ಮದರ್ ನಿಂಫಾರವರು ಸಂಸ್ಥೆಯಚುಕ್ಕಾಣಿ ಹಿಡಿದುಅದನ್ನು ಮುನ್ನಡೆಸುವುದರಲ್ಲಿ ಯಶಸ್ವಿಯಾದರು. ಸಂಸ್ಥೆಯ ಸದಸ್ಯರಲ್ಲಿಧೈರ್ಯ, ಸಾಂತ್ವನತುಂಬಿ ಕ್ರೈಸ್ತ ಸಂಪ್ರದಾಯದಅಧ್ಯಾತ್ಮಿಕಚಿಂತನೆ, ಆಚಾರ, ವಿಚಾರ ಇವುಗಳನ್ನು ಉಳಿಸಿ ಬೆಳೆಸಿ ಸಧೃಡಕ್ರೈಸ್ತ ಸಮಾಜಕಟ್ಟಲು ಪಣತೊಟ್ಟರು.ಒಬ್ಬ ಹೆಣ್ಣುಮಗಳು ಮನೆಯ ಹೊಸ್ತಿಲು ದಾಟಲು ಹರ ಸಾಹಸ ಪಡಬೇಕಾದ ಆ ಕಾಲದಲ್ಲಿ ಮಂಗಳೂರಿನ ಹಳೆ ಬಂದರಿನಲ್ಲಿರುವ ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ವಿದ್ಯೆ ನೀಡಲು ಹೆತ್ತವರನ್ನು ಪೆÇ್ರೀತ್ಸಾಹಿಸಿದರು.ಆ ಕಾರಣದಿಂದಲೇ ಮಾತೆ ನಿಂಫಾ ಫೆರ್ನಾಂಡಿಸ್ರವರು‘ಬಂದರಿನದೇವದೂತೆÉಎಂದು ಹೆಸರುವಾಸಿಯಾಗಿದ್ದು 1905ರಲ್ಲಿ ಬೋಳಾರದಲ್ಲಿ ಸಂತಅರ್ಸುಲಾ ಹೆಸರಿನಅರ್ಧ ದಿನದಕನ್ನಡ ಶಾಲೆಯನ್ನುತೆರೆದು ಮಂಗಳೂರಲ್ಲಿ ಅಸಾಂಪ್ರದಾಯಿಕಕನ್ನಡ ಶಾಲೆ ತೆರೆದಕೀರ್ತಿಗೆ ಭಾಜನರಾದರು. ಈ ಶಾಲೆಯು ಪ್ರಸ್ತುತರೊಜಾರಿಯೊ ಶಾಲೆಗಳ ಸಮುಚ್ಚಯದೊಂದಿಗಿದ್ದು ಈಗಲೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ.
ಮದರ್ ನಿಂಫಾರವರು ಸ್ವತ: ತಮ್ಮ ಕೈಗಳಿಂದ ಕಟ್ಟಿ ಬೆಳೆಸಿದ ಅರ್ಸುಲೈನ್ ಫ್ರಾನ್ಸಿಸ್ಕನ್ ಸಂಸ್ಥೆಯು ಪ್ರಸ್ತುತ147 ಶಾಖೆಗಳನ್ನು ಹೊಂದಿದ್ದು ಭಾರತದಲ್ಲಿಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಉತ್ತರ-ಪೂರ್ವ ಪ್ರಾಂತ್ಯಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ. 25 ವರ್ಷಗಳಿಂದ ಇಟೆಲಿ ಹಾಗೂ ಜರ್ಮನಿ ದೇಶಗಳಲ್ಲಿ ಹಿರಿಯ ನಾಗರಿಕರ ಶುಶ್ರೂಶೆಯಲ್ಲಿಯೂ, 15 ವರ್ಷಗಳಿಂದ ಆಫ್ರಿಕಾದತಾಂಜಾನೀಯಾ ಮತ್ತುಕೆನ್ಯಾ ದೇಶಗಳ ಅತೀ ಹಿಂದುಳಿದ ಪ್ರದೇಶಗಳಲ್ಲಿ ಹಾಗೂ ಆಮೇರಿಕಾದದಕ್ಷಿಣಡಕೋಟಾದಲ್ಲಿವಿದ್ಯಾದಾನ ಮಾಡುವಕಾರ್ಯವನ್ನುಕೈಗೊಂಡಿದೆ.
ಇದೇಡಿಸೆಂಬರ್29ರಂದು ನಡೆದ ತ್ರಿವಳಿ ಕಾರ್ಯಕ್ರಮದ ಸಮಾರಂಭದಲ್ಲಿ ಮದರ್ ನಿಂಫಾ ಫೆರ್ನಾಂಡಿಸ್ರವರ110 ನೇ ಪುಣ್ಯತಿಥಿಯ ಸ್ಮರಣೆಯೊಂದಿಗೆ ಬಲಿಪೂಜೆಯನ್ನು ಅರ್ಪಿಸಿ, ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಂಸ್ಥೆಯಘನಕಾರ್ಯದಲ್ಲಿತಮ್ಮ ವಿಶಿಷ್ಟ ದೇಣಿಗೆಕೊಟ್ಟ ಗಣ್ಯವ್ಯಕ್ತಿಗಳನ್ನು ಮಂಗಳೂರಿನ ಧರ್ಮಾಧ್ಯಕ್ಷರಾದಅತೀ ವಂóದನೀಯ ಪೀಟರ್ ಪೌಲ್ ಸಲ್ಡಾನಾರವರು ಶಾಲು ಹೊದಿಸಿ, ಮಹಾಮಾತೆಯರಾದ ವಂದನೀಯ ಸುಶೀಲಾ ಸಿಕ್ವೇರಾರವರು ಸ್ಮರಣಿಕೆಕೊಟ್ಟು ಗೌರವಿಸಿದರು. ಅದರೊಂದಿಗೆಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಂಸ್ಥೆ 1995ರಲ್ಲಿ ಪೆÇೀಪರಿಂದ ಪಡೆದ‘ವಿಶ್ವಮಾನ್ಯ ಹಕ್ಕು’’ಇದರರಜತವರ್ಷದ ಸ್ಮರಣೆಯನ್ನು ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಂಸ್ಥೆಯು ಪ್ರಕಟಿಸಿದ ನಾಲ್ಕು ಹೊತ್ತಿಗೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.ಕೊನೆಯದಾಗಿ ವಿನೋದ್ ಗಂಗೊಳ್ಳಿ ಇವರು ನಿರ್ದೇಶಿಸಿದ ‘ಮಂಗಳೂರು ಬಂದರಿನದೇವದೂತೆ’ ಮದರ್ ನಿಂಫಾ ಫೆರ್ನಾಂಡಿಸ್ಇವರಜೀವನ ಸಂದೇಶ ನೀಡುವ‘ಸಮುದ್ರಕಿನಾರೆಯ ಬೆಳಕು’ ಎಂಬ ಸಂಗೀತ-ಬೆಳಕಿನ ಬಹುಮಾಧ್ಯಮ ಪ್ರರ್ದಶನವು ಬಲು ಸೊಗಸಾಗಿ ಮೂಡಿಬಂತು.
ಸಂಸ್ಥೆಯ ಮಹಾಮಾತೆಯವರಾದ ವಂದನೀಯ ಭಗಿನಿ ಸುಶೀಲಾಸಿಕ್ವೇರಾರವರು ಸ್ವಾಗತಿಸಿದರು.ಅವರ ಸಹಾಯಕಿ ಭಗಿನಿ ಮಿಲ್ಲಿ ಫೆರ್ನಾಂಡಿಸ್ರವರು ವಂದನಾರ್ಪಣೆ ಮಾಡಿದರು.ಮಹಾಮಾತೆಯರ ಸಲಹೆದಾರರಾದ ಭಗಿನಿ ಲಿಲ್ಲಿ ಪಿಂಟೊ, ಭಗಿನಿ ಜುಲ್ಯಾನ ಪಿಂಟೊ, ಮತ್ತು ಭಗಿನಿ ಲಿಡಿಯಾ ಸೆರಾವೊ ಸಹಕರಿಸಿದರು. ಭಗಿನಿಯರಾದ ವಿನುತಡಿಸೋಜಾ, ಪ್ರೆಸಿಲ್ಲಾ ಕೊರೆಯಾ, ಅನಿತಾಡಿಸೋಜಾ ಮತ್ತುಜನಿತಾರೊಡ್ರಿಗಸ್ಕಾರ್ಯ ನಿರೂಪಣೆ ಮಾಡಿದರು.
