ರೂ.84 ಸಾವಿರ ಹಣ, ಅನಾರೋಗ್ಯ ಪೀಡಿತ ಮಗುವಿಗೆ ಹಸ್ತಾಂತರ * ಸೇವಾ ಕೆಲಸಕ್ಕೆ ಸಾಥ್ ನೀಡಿದ ಕಂಬಳಾಭಿಮಾನಿಗಳು
ಮೂಡುಬಿದಿರೆ:ಸ್ವಚ್ಛತಾ ಅಭಿಯಾನ, ಸೇವೆ ಚುಟವಟಿಕೆಗಳ ಮೂಲಕ ಮನೆಮಾತಾಗಿರುವ ಇಲ್ಲಿನ ನೇತಾಜಿ ಬ್ರಿಗೇಡ್ ಸಂಘಟನೆಯು ಕಂಬಳ ಸಂದರ್ಭದಲ್ಲಿ ವೇಷದ ಧರಿಸಿ, ಧನ ಸಂಗ್ರಹಿಸಿ, ಅನಾರೋಗ್ಯದಿಂದ ಬಳಲುತ್ತಿರುವ ಮಗುವಿಗೆ ನೆರವಾಗಿದೆ.

ಮೂಡುಬಿದಿರೆಯ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್‍ನ ಸದಸ್ಯ ವಿಕ್ಕಿ ಶೆಟ್ಟಿ ವಿಶೇಷ ವೇಷ ಧರಿಸಿದ್ದು, ನೇತಾಜಿ ಬ್ರಿಗೇಡ್‍ನ ಇತರ ಸಂಗ್ರಹಿಸಿದರು. ಹೀಗೆ ಸಂಘ್ರಹವಾದ 84 ಸಾವಿರ ಮೊತ್ತದ ಹಣವನ್ನು ಅಡ್ರಿನಮೈಲೋನ್ಯೂರೋಪತಿ ಕಾಯಿಲೆಯಿಂದ ಬಳಲುತ್ತಿರುವ 9 ವರ್ಷದ ಮಗು ಭವಿತ್‍ಗೆ ನೀಡಲಾಯಿತು.
ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿಯಿರುವ ಪುರಾತನ ಶ್ರೀ ಮಹಾಕಾಳಿ ಆದಿಶಕ್ತಿ ದೇವಳದ ಆವರಣದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ. ಅವರು ಮಗುವಿನ ತಾಯಿ ಸೌಮ್ಯ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ವಕೀಲ ಶಾಂತಿ ಪ್ರಸಾದ್ ಹೆಗ್ಡೆ , ಪುರಸಭಾ ಸದಸ್ಯರಾದ ನಾಗರಾಜ್ ಪೂಜಾರಿ, ರಾಜೇಶ್ ನಾಯ್ಕ್, ಮಾಜಿ ಸೈನಿಕರಾದ ಪ್ರಭಾಕರ್ ರೈ , ಶಶಿಧರ್ ಭಂಡಾರಿ, ಕುಮಾರ್ ಮಾಸ್ತಿಕಟ್ಟೆ , ಶರತ್ ಸ್ವರಾಜ್ಯ ಮೈದಾನ , ಅಮೃತ ಸಂಜೀವಿನಿ ಸದಸ್ಯರುಗಳು ಮತ್ತು ನೇತಾಜಿ ಬ್ರಿಗೇಡ್ ಸಂಚಾಲಕರು, ಸದಸ್ಯರುಗಳು ಉಪಸ್ಥಿತರಿದ್ದರು.
ಅಮೃತ ಸಂಜೀವಿನಿ ಮಂಗಳೂರು ಘಟಕದಿಂದ ಮಗುವಿನ ಚಿಕಿತ್ಸೆಗೆ 5 ಸಾವಿರವನ್ನು ಘೋಷಿಸಲಾಯಿತು.
