ಕೋಲಾರ : ಹೋಬಳಿಯ ರಾಯಲ್ಪಾಡು,ಅಡ್ಡಗಲ್,ಗೌನಿಪಲ್ಲಿ ಪಂಚಾಯಿತಿ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ಕೇಂದ್ರ ಸರ್ಕಾರವು ಇತ್ತೀಚಿಗೆ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ರ್ಯಾಲಿಗಳು ನಡೆಯಿತು. ಅಡ್ಡಗಲ್ ಗ್ರಾಮದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಶಾಸಕ ಕೆ.ಆರ್.ರಮೇಶ್‍ಕುಮಾರ್ ಮಾತನಾಡಿ ಭಾರತವು ಜಾತ್ಯತೀತ ಮತ್ತು ಪ್ರಜಾಸತ್ಮಕ ದೇಶವೆಂದು ಗುರುತಿಸಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ಕಾರಣ ಇಡೀ ದೇಶ ಬೀದಿಗಿಳಿದು ಪ್ರತಿಭಟಿಸುತ್ತದೆ. ಸಂಸತ್ತು ಇರುವುದು ಜನರ ಅಪೇಕ್ಷೆ ಮತ್ತು ಸಮಸ್ಯೆಗಳನ್ನು ಗೌರವಿಸಿ ಸಂವಿಧಾನ ಚೌಕಟ್ಟಿನ ಒಳಗೆ ಕೆಲಸ ಮಾಡಲು .ಆದರೆ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ದವಾಗಿ ತಮಗಿರುವ ಬಹಮತ ಆಧರಿಸಿ ಶಾಸನ ಜಾರಿಗೆ ತರಲು ಅವಕಾಶವಿಲ್ಲ. ಅಂತಹ ಶಾಸನಗಳಿಗೆ ಮಾನ್ಯತೆ
ಇರುವುದಿಲ್ಲ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ಭಾನುವಾರ ಉಡುಪಿಯ ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮಿಗಳವರು ಆನಾರೋಗ್ಯದಿಂದ ದೇಹಾಂತ್ಯವಾಗಿರುವ ಹಿನ್ನೆಲೆಯಲ್ಲಿ ಮೌನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ರಾಯಲ್ಪಾಡಿನ ರಂಗಮಂದಿರದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ವಕೀಲ ಎನ್. ಶಿವನ್ಮಾ ತನಾಡಿ ಸಂವಿಧಾನವನ್ನು ಆಂಬೇಡ್ಕರ್ನೇ ತೃತ್ವದಲ್ಲಿ ರಚನೆ ಮಾಡಲಾಗಿದ್ದು ಅದರಲ್ಲಿ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ದೇಶದಲ್ಲಿನ ಪ್ರತಿಯೊಬ್ಬರು ಸಮಾನತೆಯಿಂದ ಸಹಬಾಳ್ವೆಯೊಂದಿಗೆ ಜೀವನವನ್ನು ಮಾಡಬೇಕಾಗಿದೆ.
ಸರ್ಕಾರದಿಂದ ಜನವಿರೋಧಿ ತಿದ್ಧುಪಡಿಗಳು ಜಾರಿಯಾದಲ್ಲಿ ನಮ್ಮಿಂದ ಆಯ್ಕೆಯಾದ ಜನಪ್ರತಿನಿದಿಗಳ ಮೂಲಕ ಒತ್ತಡ ಹೇರಿ ಬದಲಾವಣೆ ತರಬಹುದಾಗಿದೆ ಎಂದರು. ಎಲ್ಲಾ ಪ್ರತಿಭಟನಾ ಸಭೆಗಳಲ್ಲಿ ಗಾಂದೀಜಿ , ಅಂಬೇಡ್ಕರ್ ಬಾವಚಿತ್ರಗಳಿಗೆ ನಮಿಸುವುದರ ಮೂಲಕ ಪ್ರತಿಭಟನಾ ಸಭೆ ಪ್ರಾರಂಭಿಸಲಾಯಿತು ಹಾಗೂ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಎಲ್ಲಾ ಜನಾಂಗದವರು ಒಗ್ಗಟ್ಟು ಪ್ರದರ್ಶಿಸಿದರು ರಾಯಲ್ಪಾಡು ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಆರ್.ವಿ.ನರೇಶ್,ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜು,ಗ್ರಾ.ಪಂ.ಸದಸ್ಯ ಆರ್.ಗಂಗಾದರ್,ಗೌನಿಪಲ್ಲಿಯಲ್ಲಿ ಗ್ರಾ.ಪಂ.ಸದಸ್ಯ ರಮೇಶ್ ಮಾತನಾಡಿದರು.
ಜಿ.ಪಂ.ಸದಸ್ಯ ಮ್ಯಾಕಲನಾರಾಯಣಸ್ವಾಮಿ, ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷ ಸಂಜಯ್‍ರೆಡ್ಡಿ,ರಾಯಲ್ಪಾಡು ಗ್ರಾ.ಪಂ.ಅಧ್ಯಕ್ಷ ನಾಗರಾಜ್,ಸದಸ್ಯರಾದ ಶ್ರೀನಿವಾಸ್,ಬಾಯಿಪಲ್ಲಿ ಮಂಜುನಾಥ್,ವೆಂಕಟರಮಣಾರೆಡ್ಡಿ, ಗೌನಿಪಲಿಯಲ್ಲ್ಲಿ ಉಪಾಧ್ಯಕ್ಷ ಮಂಜುನಾಥ್ಸ ತ್ಯನಾರಾಯಣ್,ಸೋಮಶೇಖರ್,ಕೋಡಿಪಲ್ಲಿಸುಬ್ಬಿರೆಡ್ಡಿ,ರಹಮತುಲ್ಲಾ,ಅಶ್ವಥ,ವೈ.ಎಂ.ಅಮೀಖಾನ್,ಅಡ್ಡಗಲ್ ಪ್ರತಿಭಟನಾ ಸಭೆಯಲ್ಲಿ ಮುಖಂಡರಾದ ಕಲೀಮ್‍ಉಲ್ಲಾ,ನಿಸಾರ್‍ಉಲ್ಲಾಖಾನ್,ಅನ್ವೀರ್‍ಸಾಬ್,ದೊರೆಸ್ವಾವಿರೆಡ್ಡಿ,ನರಸಿಂಹಾರೆಡ್ಡಿ,ಶ್ರೀನಿವಾಸ್‍ರಾವ್ , ತಾಲೂಕು ಯುತ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಸ್.ವೆಂಕಟರಮಣಪ್ಪ, ಎಪಿಎಂಸಿ ಸದಸ್ಯ ಪೆದ್ದರೆಡ್ಡಿ, ರಾಮಸ್ವಾಮಿಶೆಟ್ಟಿ ,ಎಸ್.ವೆಂಕಟೇಶ್ ಇದ್ದರು.

