ಬಂಟ್ವಾಳ : ಪೌರತ್ವ ಕಾಯಿದೆ ವಿರೋಧಿಸಿ ಸಮಾನ ಮನಸ್ಕ ಮುಸ್ಲಿಂ ಸಂಘಟನೆಗಳು, ಪೌರತ್ವ ಕಾಯಿದೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಡಿ. ೩೦ರಂದು ಮಧ್ಯಾಹ್ನ 2.30 ಕ್ಕೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎಸ್. ಮುಹಮ್ಮದ್ ಶಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಪ್ರತಿಭಟನಾಕಾರರು ಯಾವುದೇ ಧರ್ಮದ ವಿರುದ್ದ ಘೋಷಣೆ ಕೂಗುವುದಾಗಲಿ, ಸಾರ್ವಜನಿಕರು,ವಾಹನಸಂಚಾರಕ್ಕೆ ತೊಂದರೆ ಮಾಡದೆ ಶಾಂತಿಯಿಂದ ಭಾಗವಹಿಸುವಂತೆ ಅವರು ಕೋರಿದ್ದಾರೆ.ಈ ಪ್ರತಿಭಟನಾ ಸಭೆಗೆ ಸ್ಥಳೀಯ ವಿವಿಧ ಸಂಘಟನೆಗಳಾದ ಎಸ್ ಕೆ ಎಸ್ ಎಸ್ ಎಫ್,ಎಸ್ ಎಸ್ ಎಫ್,ಜಮಾತೆ ಇಸದಲಾಮಿ ಹಿಂದ್, ಸಲಫೀ ಮೂವ್ ಮೆಂಟ್,ಇಮಾಂ ಕೌನ್ಸಿಲ್,ಕರ್ನಾಟಕ ಮುಸ್ಲಿಂ ಜಮಾತ್ ಪಾಫ್ಯಲರ ಫ್ರಂಟ್ ಆಫ್ ಇಂಡಿಯಾ,ಬ್ಯಾರಿ ಪೌಂಡೇಶನ್ ಬಂಟ್ವಾಳ,ಮುಸ್ಲಿಂ ಸಮಾಜ ಬಂಟ್ವಾಳ,ಸಿಎಫ್ ಐ,ಬಂಟ್ವಾಳ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈೇಶನ್,ಎಸ್ ಡಿ ಟಿ ಯು ಬಂಟ್ವಾಳ,ಮುಸ್ಲಿಂ ಸ್ಟೂಡೆಂಟ್ ಫಡೆರೇಶನ್ ,ಬಂಟ್ವಾಳ ತಾ.ಸರ್ವ ಜಮಾತ್ ಕಮಿಟಿ ಹಾಗೂ ಕಾಂಗ್ರೆಸ್,ಜೆಡಿಎಸ್,ಮುಸ್ಲಿಂಲೀಗ್ ಸಹಿತ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
