ಕವನ : *ಕ್ಯಾಲೆಂಡರ್ ದಿನಗಳು* ಲೇಖನ : ಬಸವರಾಜ ಕಾಸೆ
ನಾನು ಕ್ಯಾಲೆಂಡರ್ ದಿನ ತಿರುವಿ ಹಾಕುವಂತೆ ನಿನ್ನೆಯ ಕಳೆಬರವನ್ನು ಕೊಡವಿ ಹಾಕಿ ಸೆಟೆದೆದ್ದು ನಿಲ್ಲುವೆ ನನ್ನೆ ನಾ ಪುನಶ್ಚೇತನಗೊಳಿಸಿಕೊಂಡು ಮತ್ತೆ ಮರುದಿನದವರೆಗೂ ತಿರುಗಿಯೂ ನೋಡುವುದಿಲ್ಲ ನಾನದನ್ನು ಅಷ್ಟು ಸಮಯದ ಕೊರತೆ ನನಗೆ ಒಂದೇ ಸಮನೆ ಎದೆಯೊಳಗೆ ಪ್ರತಿ ದಿನವೂ ಕೊರೆಯುತ್ತೆ ಇಂದು ಮಾಡದೆ ಮುಂದೆ ಹಾಕಿದೆ ನನ್ನ ಕೆಲಸಗಳನ್ನು ಎಂದು ಕೆಲಸಕ್ಕಿಂತ ಹೆಚ್ಚಿನ ಚಿಂತೆ ನನ್ನ ಕುಟುಂಬದ ಬಗ್ಗೆ ದಿನಾಂಕವನ್ನು ನೋಡಿ ತಿಳಿದುಕೊಳ್ಳುವ ನನಗೆ ಅಂದು ಯಾವ ದಿನ ಏನು ವಿಶೇಷ ಎಂದು ತಿಳಿ ಹೇಳಿ ಆಚರಿಸುವವರು ಅವರೇ ಅವಾಗಲೇ ನನಗೂ ಗೊತ್ತಾಗಿ ಅವರೊಂದಿಗೆ ಸಂಭ್ರಮಿಸುವೆ ಬೆರೆತು ಆದರೆ ಆ ಖುಷಿಯ ಕ್ಷಣಗಳಿಗೆ ಒಂಚೂರು ಕೊರತೆಯಾಗದಂತೆ ಸಕಲ ಸವಲತ್ತು ಅನುಕೂಲಗಳನ್ನು ನಾ ಮಾಡಿ ಕೊಡುತ್ತಿರುವೆನಾ ನನ್ನವರಿಗೆ ಇದು ನನ್ನ ಭಾದಿಸುವ ಸಮಸ್ಯೆ ನನಗೆ ಅಂತ ಏನಿದೆ ಈ ಜಗತ್ತಲ್ಲಿ ಅವರ ಮೊಗದ ಮಂದಹಾಸದಲ್ಲಿ
ನನ್ನ ನಗುವಿದೆ ಎನ್ನುವ ಭಾವವೇ ನನ್ನನ್ನು ಗಟ್ಟಿಗೊಳಿಸಿ ಮೆಟ್ಟಿ ನಿಲ್ಲುವಂತೆ ಮಾಡುತ್ತದೆ ಮೂರು ವಿವಿಧ ಕಾಲಗಳನ್ನು ನಾ ನೆರಳಾಗಿರುವ ಕಾರಣ ಬೇಸಿಗೆಯಲ್ಲಿ ಕಂಗೆಟ್ಟು ಬೇಯುವುದಿಲ್ಲ ನೇವರಿಸಿ ಆರೈಕೆಗೈಯುವವರವರು ಮೈ ಮನವೂ ತಂಪೆನಿಸುವಂತೆ ನಾ ಚಳಿಯಲ್ಲಿ ಒಂದಿಷ್ಟು ಕದಲುವುದಿಲ್ಲ ಅವರ ಬೆಚ್ಚನೆ ಪ್ರೀತಿ ಇರುತ್ತದೆ ಪ್ರತಿ ಕ್ಷಣವೂ ಮಿಡಿತವನ್ನೂ ಹೆಚ್ಚಿಸುತ್ತಲೇ ಮಳೆಗಾಲ ನನ್ನ ಎಂದೂ ನೆನೆಸಿಯೇ ಇಲ್ಲ ಇಲ್ಲಿಯವರೆಗೆ ನಾನೇ ನೆನೆಯುವೆ ಕೆಲವು ಸಾರಿ ನನ್ನವರೊಂದಿಗೆ ನಲಿಯಲು ಬೆವರು ಎಷ್ಟು ಹರಿಸುವೆನೋ ಅಷ್ಟು ಆನಂದ ನನಗೆ ತಿಂಗಳಾಗುವ ಮೊದಲೇ ಅರಿವಾಗುವುದು ನನಗೆ ಮನೆಗೆ ಬೇಕಾದ ಎಲ್ಲಾ ತಂದು ತುಂಬಿಸಿದೊಡನೆ ಹಿರಿಹಿರಿ ಹಿಗ್ಗಿ ಬೀಗುವೆ ನಾ
ಹಾಗೆಂದು ಕೆಲಸ ಕೆಲಸ ಕೆಲಸ ಯಾರು ಮಾಡುವರು 24 ಘಂಟೆ ನನಗೆ ನನ್ನದೇ ಆದ ಆಸೆ ಕನಸುಗಳಿವೆ ನನ್ನವರೊಂದಿಗೆ ಹೆಚ್ಚೆಚ್ಚು ಕಲೆತು ಅವರ ಬೇಕು ಬೇಡಗಳ ಅರ್ಥ ಮಾಡಿಕೊಂಡು ಅಂತೆಯೇ ನಡೆದುಕೊಳ್ಳುವುದು ನನ್ನ ಹಬ್ಬ ಹರಿದಿನಗಳ ಆಚರಣೆ ಆಗಾಗ ಅಲ್ಲಿ ಇಲ್ಲಿ ಸುತ್ತಾಡಿ ಪಾರ್ಕು ಪಿಲ್ಮು ಹೋಟೆಲು ಸುತ್ತಾಡಿ ಬರುವೆ ಅವರೊಂದಿಗೆ ಮನೆಯಲ್ಲಿ ಇದ್ದು ಇದ್ದು ಅವರಿಗೆ ಆಗುವ ಬೇಸರ ನಾ ಬಲ್ಲೆ ನನಗಿಂತ ಚೆನ್ನಾಗಿ ನನ್ನನ್ನು ಅವರು ಮಾತ್ರ ಬಲ್ಲರು
ಛೇ ಈ ಹಾಳಾದ ವರ್ಷಗಳು ಎಷ್ಟು ಬೇಗ ಬಂದು ಉರುಳುವವೋ ನಾ ಕ್ಯಾಲೆಂಡರ್ ಮಾತ್ರ ಕಿತ್ತಿ ಬಿಸಾಕುವುದಿಲ್ಲ ಅದರೊಂದಿಗೆ ನನ್ನೊಳಗಿನ ಕಪಟ ಅವಗುಣಗಳನ್ನು ಸೇರಿಸಿ ಕಷ್ಟ ನೋವುಗಳನ್ನು ಸಹ ಕಿತ್ತೆಸೆಯುವೆ
ಆಗಲೇ ನನಗೆ ಆನಂದ ಹೆಚ್ಚೆಚ್ಚು ನಾ ಮುನ್ನಡೆಯುವೆ ಯಾವಾಗಲೂ ನನ್ನೆ ನಾ ಸುಧಾರಿಸಿಕೊಂಡು ನಿರಾಳವಾಗುತ್ತಲೇ ಹೀಗೆ …


