ಲೇಖನ : ದೀಪಕ್ ಕಾಮತ್ ಎಳ್ಳಾರೆ

ಮೂಡುಬಿದಿರೆ :  ಕರಾವಳಿಯ ಗಂಡು ಕಲೆ ಯಕ್ಷಗಾನ.  ಇದು ಪಾರಂಪರಿಕವಾಗಿ ಬಂದಿರುವಂತಹ ಕಲೆ.ಕರ್ನಾಟಕದ ಪರಂಪರೆಯುತ ಕಲೆಯಾದ ಯಕ್ಷಗಾನ ಇಂದು ಶ್ರೀಮಂತ, ಸುಂದರ ಕಲೆಎಂದೇ ಪರಿನಿತವಾಗಿದೆ. ಕಾಲದಿಂದ ಕಾಲಕ್ಕೆ ಶ್ರೇಷ್ಟ ಮಟ್ಟದ ಕಲಾವಿದರು ಉದಯಸಿ ತಮ್ಮ ಪ್ರತಿಭೆಯ ಛಾಪನು  ಪರಂಪರೆಗೆ ಸೇರಿಸಿ ಹೋಗಿದ್ದಾರೆ. ಇಲ್ಲೊಂದು ಮಂಡಳಿ ನಿಧಾನವಾಗಿ ಕಲೆಯನ್ನು ಎತ್ತರಕ್ಕೆ  ಕೊಂಡೊಯುತಿದರೆ . ಇವರ ಬಗ್ಗೆ ತಿಳಿಯೋಣ

WhatsApp Image 2019-12-29 at 5.21.06 PM (8)

WhatsApp Image 2019-12-29 at 5.21.06 PM (7)

WhatsApp Image 2019-12-29 at 5.21.06 PM

ಯಕ್ಷಗಾನವನ್ನು ಬೆಳೆಸುವ ಉದ್ದೇಶದಿಂದ ವಾಸುಕೀ ಯಕ್ಷಗಾನ ಕಲಾ ಮಂಡಳಿ ಯನ್ನು ಸ್ತಾಪಿಸಲಾ ಯಿತು . ಭೂಮಿಗೆ ಹೇಗೆ ನೇಸರನು ಬೆಳಕನ್ನು ಕೊಡುತ್ತಾನೆ ಹಾಗೆಯೇ ಈ ಮಂಡಳಿಗೆ ಬೆಳಕಾಗಿ ನಿಂತಿರುವ ನೇಸರರು ರವೀಂದ್ರ ಪಡ್ಡಮ ಹಾಗೂ ರವಿ ದೊಂಡೆರಂಗಡಿ. ಯಕ್ಷ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದ ಬೆನ್ನಲ್ಲೇ ವಾಸುಕೀ ಯಕ್ಷಗಾನ ಕಲಾ ಮಂಡಳಿಯು ಹಲವಾರು ಕಲಾಭಿಮನಿಗಳ ಪ್ರಿಯ ಯಕ್ಷಗಾನ ಮಂಡಳಿಯಾಗಿದೆ. ಬಾಲ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಹ ಈ ಮಂಡಳಿಯಲ್ಲಿ ಉತ್ತಮ ಕಲಾ ಕುಸುಮಗಳು ಅರಳಿ ನಿಂತಿವೆ .ಈ ಕಲಾ ಕುಸುಮಗಳ ಪ್ರತಿಬೆ ಯನ್ನು ಅರಳಿ ಸುವ ಕಾರ್ಯವನ್ನು ಖ್ಯಾತ ಗುರು ಪ್ರಸಂಗಕರ್ತ ಭೋಜರಾಜ ಶೆಟ್ಟಿ ಶಿರ್ವ ಅವರು ಮಾಡುತ್ತಿದ್ದಾರೆ.

WhatsApp Image 2019-12-29 at 5.21.06 PM (6)

WhatsApp Image 2019-12-29 at 5.21.06 PM (5)

ಯಕ್ಷ ಕಲಾ ರಸಿಕರ ಪ್ರಾಯೋಜಕತ್ವದಿಂದ ಯಕ್ಷಗಾನ ಪ್ರದರ್ಶನ ಮಾಡುತ್ತಿರುವ ಈ ಮಂಡಳಿಯ ಹೆಮ್ಮೆಯ ಕಲಾವಿದರು ರೋಶನ್, ಪ್ರತೀಕ್ಷ ದೊಂಡೆರಂಗಡಿ. ಶ್ವೇತಾ ,ರಕ್ಷಿತಾ ,ಸೌಮ್ಯಾ , ಸಂತೋಷ್ ಗುರುರಾಜ್ ರಂಗನಪಲಕೆ, ಗೌತಮ, ಧೀರಜ್, ಧನರಾಜ್, ಗುರುರಾಜ್ ಹಿರಿಯಡಕ.ಸವಿನ್, ನವನೀತ್ ಕಾವ್ಯ , ಆದಿತ್ಯಾ, ದಿಶಾ ಪ್ರತಿಕ್ಷಾ ಕಾರ್ಕಳ, ಮೋಹಿನೀ ಉಷಾ , ಶ್ರುತಿ ಹಾಗೂ ಹಿಮ್ಮೇಳದಲ್ಲೀ ಭಾಗವತರಾಗಿ ಕಟೀಲು ಮೇಳದ ಖ್ಯಾತ ಭಾಗವತ ಸತೀಶ್ ಭಟ್ ,ರಂಗನಪಲಕೆ, ಹಾಗೂ ವಿಕ್ರಮ್ ಶೆಟ್ಟಿ ಇದ್ದು ಮಂಡಳಿ ಉತ್ತಮ ಪ್ರದರ್ಶನ ನೀಡಲು ಇವರು ಸಹಕಾರಿಯಾಗಿದ್ದಾರೆ.

WhatsApp Image 2019-12-29 at 5.21.06 PM (4)

WhatsApp Image 2019-12-29 at 5.21.06 PM (3)

WhatsApp Image 2019-12-29 at 5.21.06 PM (2)

WhatsApp Image 2019-12-29 at 5.21.06 PM (1)

ಕಲಾ ರಸಿಕರನ್ನು ರಂಜಿಸುತ್ತಿರುವ ವಾಸುಕೀ ಮಂಡಳಿಯು ಈಗ ಉಡುಪಿ ಜಿಲ್ಲೆಯಾದ್ಯಂತ  ಮಹಿಷ ಮರ್ಧಿನಿ ಪ್ರಸಂಗವನ್ನು ಅತ್ಯ೦ತ ಉತ್ತಮವಾಗಿ ಪ್ರದರ್ಶಿಸುತ್ತಿದೆ .  ಕಲೆಯ ಬೆಳವಣಿಗೆಗೆ ರವೀಂದ್ರ ಪಡ್ಡಮ್ ಹಾಗೂ ರವೀ ದೊಂಡೆ ರಂಗಡಿ ಇವರೊಂದಿಗೆ ಮಂಡಳಿಯ ಬಾಲ ಕಲಾವಿದರು ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಮಂಡಳಿಯ ಬೆಳವಣಿಗೆಗೆ ಸಂಜೀವ ಪಡ್ಡಮ ಇವರು ಸಹಕರಿಸಿಸುತ್ತಿದ್ದಾರೆ . ಮುಂದೆ ಇನ್ನು ಹೆಚ್ಚು ಪೌರಾಣಿಕ ಪ್ರಸಂಗ ಗಳನ್ನು ನಮ್ಮ ಬಾಲ ಕಲವಿದರಲ್ಲೀ ಮಾಡಿ ಸಬೇಕೆಂಬುದು ನನ್ನ ಹಂಬಲವಾಗಿದೆ ಎನ್ನುತ್ತಾರೆ ಯಕ್ಷ ಗುರು ಭೋಜರಾಜ್ ಶೆಟ್ಟಿ. ಇವರ ಮಂಡಳಿಯು ಹೀಗೇ ಕಲಾ ಸೇವೇಯಲ್ಲಿ ತೊಡಗಲಿ . ಕಲಾ ಆರಾಧನೆಯಲ್ಲಿ ವಿಶಿಷ್ಟ ಸಾಧನೆ ಮಾಡುವಂತಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ ಎನ್ನುತ್ತಾ “ಯಕ್ಷಗಾನಂ ಗೆಲ್ಗೆ ಯಕ್ಷ ಗಾನಂ ಬಾಳ್ಗೆ “  .

By suddi9

Leave a Reply

Your email address will not be published. Required fields are marked *