ಬಂಟ್ವಾಳ, : ಕೊಡಂಗೆ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆ, ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರೌಢಶಾಲೆ ಕೊಡಂಗೆ ಹಾಗೂ ಎಸ್‍ಡಿಎಂಸಿ ಕೊಡಂಗೆ, ಪರ್ಲಿಯಾ ಎಜುಕೇಶನ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಕೊಡಂಗೆ ಶಾಲಾ ವಾರ್ಷಿಕೋತ್ಸವ ಶನಿವಾರ ನಡೆಯಿತು.

28 btl kodange
ಪರ್ಲಿಯಾ ಎಜುಕೇಶನ್ ಟ್ರಸ್ಟ್‍ನ ಸಂಚಾಲಕ ಸತ್ತಾರ್ ಶಾಲಾ ಧ್ವಜಾರೋಹಣ ನೆರವೇರಿಸಿದರು. ಪುರಸಭಾ ಸದಸ್ಯ ಮುಹಮ್ಮದ್ ನಂದರಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಯಮಿ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವೇದಿಕೆಯಲ್ಲಿ ಪುರಸಭಾ ಸದಸ್ಯ ಲುಕ್ಮಾನ್, ಸಿಆರ್‍ಪಿ ಉಷಾ ಸುವರ್ಣ, ಮುಹಮ್ಮದ್ ಡಿ, ಪಿ.ಎ. ರಹೀಂ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಎಂ. ಇಸ್ಮಾಯಿಲ್, ಮುಖ್ಯೋಪಾಧ್ಯಾಯಿನಿ ಸೋನಿತ ಕೆ., ಟ್ರಸ್ಟ್ನ ಗೌರವಾಧ್ಯಕ್ಷ ಹಂಝ ಪರ್ಲಿಯಾ, ನೇತಾಜಿ ಸುಭಾಶ್ಚಂದ್ರ ಶಾಲೆಯ ಮುಖ್ಯೋಪಾಧಾಯಿನಿ ಉಮಾವತಿ, ಕಾರ್ಯಾಧ್ಯಕ್ಷ ಸುರೇಶ್, ವಿದ್ಯಾರ್ಥಿನಾಯಕಿ ಫಾತಿಮ ಸಫ, ನಾಯಕ ಮುಹಮ್ಮದ್ ಅಝೀಂ ಹಾಜರಿದ್ದರು. ಶಾಲಾ ಮುಖ್ಯಶಿಕ್ಷಕಿ ವರದಿ ವಾಚಿಸಿದರು. ವಿವಿಧ ಕ್ರೀಡೆ, ಸಾಂಸ್ಕøತಿಕ ಸ್ಪರ್ಧಾ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಶಿಕ್ಷಕಿ ಶಶಿಕಲಾ ಕೆ.ಎನ್. ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ರಮಣಿ ಮೋಹನ್ ವಂದಿಸಿದರು. ಅಶ್ರಫ್ ಕಲ್ಲಡ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *