ಬಂಟ್ವಾಳ.   ಗುರುವಾರ ಸೂರ್ಯ ಗ್ರಹಣದಿಂದಾಗಿ ಬೆಳಗಿನ ಹೊತ್ತು ಸಾರ್ವಜನಿಕರು ಮನೆಯಿಂದ ಹೊರಬಾರದ ಹಿನ್ನೆಲೆಯಲ್ಲಿ  ಬಂಟ್ವಾಳ ಸಹಿತ   ಬಹುತೇಕ ಕಡೆಗಳಲ್ಲಿ ಅಘೋಷಿತ ಬಂದ್‌ನ ವಾತಾವರಣವಿತ್ತು.ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡಿನಲ್ಲಿ ಬೆಳಗ್ಗೆ ಸುಮಾರು ೧೧ ಗಂಟೆಯವರೆಗೂ ವಾಹನಗಳ ಸಂಚಾರವಿದ್ದರೂ, ಜನ ಜನಸಂಚಾರವೇ ಇರಲಿಲ್ಲ.
ಬೆಳಗ್ಗಿನ ಹೊತ್ತು ಅಂದರೆ ಸುಮಾರು ೧೧ ಗಂಟೆಯವರೆಗೆ ಹೆಚ್ಚಿನ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ. ಗ್ರಹಣವೆಂದು ಮನೆಯಲ್ಲೇ ಕೂತಿದ್ದ ಸಾರ್ವಜನಿಕರು ಬಳಿಕ ಸ್ನಾನ ಮಾಡಿ ಅಡುಗೆ ತಯಾರಿಸಿ ಊಟ ಮಾಡಿ ಅನಂತರ ಹೊರಟು ಬಂದಿದ್ದರು. ಗ್ರಹಣ ದೋಷ ನಿವಾರಣೆಗಾಗಿ ಹೆಚ್ಚಿನ  ದೇವಳದಲ್ಲಿ  ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳು ನಡೆದವು.
18-41-24-WhatsApp-Image-2019-12-26-at-11.30.44-AM-1068x493

ಶಾಲೆ ಕಾಲೇಜುಗಳಲ್ಲೂ ಗ್ರಹಣದ ಪ್ರಭಾವ ಕಂಡುಬಂದಿದ್ದು, ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಕಡಿಮೆ ಇತ್ತು. ಶಾಲೆಗಳಿಗೆ ಅಧಿಕೃತವಾಗಿ ರಜೆ ಘೋಷಣೆಯಾಗದಿದ್ದರೂ, ವಿದ್ಯಾರ್ಥಿಗಳಿಲ್ಲದೆ ಬಹುತೇಕ ಕಡೆ ತರಗತಿಗಳು ನಡೆದಿರಲಿಲ್ಲ. ಹೀಗಾಗಿ ಹೆಚ್ಚಿನ ಕಡೆಗಳಲ್ಲಿ ರಜೆಯ ವಾತಾವರಣವೇ ಕಂಡುಬಂದಿತ್ತು.          ಮೋದಿ ಹೆಸರಿನಲ್ಲಿ  ಪೂಜೆ:                            ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಎಲ್ಲಡೆ ಗ್ರಹಣ ದೋಷದ ಪರಿಹಾರಕ್ಕಾಗಿ ಗುರುವಾರ ಬೇರೆ ಬೇರೆ ರೀತಿಯ ಪೂಜಾ ವಿಧಿ ವಿಧಾನಗಳು ನಡೆದಿದ್ದು, ಬಂಟ್ವಾಳ ತಾಲೂಕಿನ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲೂ ಗ್ರಹಣ ಶಾಂತಿ ಹೋಮ ಆಯೋಜಿಸಲಾಗಿತ್ತು.

ಈ ವೇಳೆ ಮೋದಿ ಅಭಿಮಾನಿ ಭಕ್ತರು ಪ್ರಧಾನಿಯ ಹೆಸರಿನಲ್ಲಿ ಹೋಮದ ನಿರ್ದಿಷ್ಟ ಮೊತ್ತವನ್ನು ಪಾವತಿಸಿ ರಶೀದಿ ಮಾಡಿಕೊಂಡು ಪೂಜೆ ಮಾಡಿಸಿದ್ದಾರೆ. ಮೋದಿಯವರ ಪೂರ್ಣ ಹೆಸರಿನೊಂದಿಗೆ ರಾಶಿ, ನಕ್ಷತ್ರವನ್ನೂ ತಿಳಿದುಕೊಂಡು ಈ ರೀತಿ ಹೋಮದ ಸೇವೆ ನೀಡಿದ್ದಾರೆ.ಪ್ರಧಾನಿಯವರಿಗೆ ದೇಶವನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸುವ ಶಕ್ತಿ ಸಿಗಲಿ ಎಂದು ಹೋಮ ಮಾಡಿಸಿದ್ದೇವೆ ಎಂದು ಅಭಿಮಾನಿ ಭಕ್ತರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *