ಬಂಟ್ವಾಳ: ಮಕ್ಕಳು ಹಾಗೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಚಿಣ್ಣರಮೋಕೆದ ಕಲಾವಿದರ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿ ಹಾಕಲಾದ ಕೀರ್ತಿಶೇಷ ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್ ವೇದಿಕೆಯಲ್ಲಿ ಜ.1ರ ವೆರಗೆ ನಡೆಯಲಿರುವ “ಕರಾವಳಿ ಕಲೋತ್ಸವ 2019-20” ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉತ್ತಮ ಕಲಾವಿದನಿಗೆ ಬದುಕು ರೂಪಿಸಲು ಪ್ರಸ್ತುತ ದಿನಗಳಲ್ಲಿ ಅವಕಾಶವಿದ್ದು, ಕಲೆಯನ್ನು ಪ್ರೀತಿಸುವ ಮನಸ್ಸುಗಳಿಗೆ ಪೂರಕವಾದ ಕಾರ್ಯಕ್ರಮಗಳು ರೂಪುಗೊಳ್ಳಲಿ ಎಂದರುಟ ಹೇಳಿದರು. ಇದೇವೇಳೆ ಚಿಣ್ಣರ ಚಿತ್ತಾರ ಚಿತ್ರಕಲೆ, ವಸ್ತು ಪ್ರದರ್ಶನ, ಅಮ್ಯೂಸ್ ಮೆಂಟ್ ಪಾಕ್ ೯ನ್ನು ಉದ್ಘಾಟಿಸಲಾಯಿತು. ಯಕ್ಷಗಾನ ಕಲಾವಿದ,ಸಂಘಟಕ ಸರಪಾಡಿ ಆಶೋಕ್ ಶೆಟ್ಟಿ ಅವರಿಗೆ “ಕರಾವಳಿ ಸೌರಭ” ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.ರಾಜೇಶ್ ಕೊಟ್ಟಾರಿ ಸನ್ಮಾನ ಪತ್ರ ವಾಚಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆಶೋಕ್ ಶೆಟ್ಟಿ ಯಕ್ಷಗಾನಕ್ಕೆ ಯಾವತ್ತು ಅಳಿವಿಲ್ಲ, ಕಲಾಸರಸ್ವತಿ, ತನ್ನ ಯಕ್ಷ ಗುರುವಿಗೆ ಸಂದ ಪ್ರಶಸ್ತಿಯಾಗಿದೆ ಎಂದರು. ಈಗಾಗಲೇ ಬಂಟ್ವಾಳ ಸಾವಿರಕ್ಕು ಹೆಚ್ಚು ಮಂದಿ ಯಕ್ಷಗಾನ ತರಬೇತಿ ಪಡೆಯುತ್ತಿದ್ದು,ಮುಂದಿನ ಕೆಲವೇ ಸಮಯದಲ್ಲಿ ಬಂಟ್ವಾಳ ತಾಲೂಕು ಕಲಾ ತಾಲೂಕಾಗಲಿದೆ ಎಂದರು. ಆದೇ ರೀತಿ ಸಂಗೀತ ಕ್ಷೇತ್ರದ ಪ್ರತಿಭೆ ಜನ್ಯಾಪ್ರಸಾದ್ ಅನಂತಾಡಿ ಅವರಿಗೆ ಚಿಣ್ಣರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಿಣ್ಣರೋತ್ಸವ 2019 ಅಧ್ಯಕ್ಷ ಮಾ.ಆಶ್ಲೇಷ್ ಕೆ. ಪೊಲೀಸ್ ಲೈನ್ , ಕಲಾವಿದೆ ದೀಕ್ಷಾ ಡಿ. ರೈ ಪುತ್ತೂರು, ತಹಶೀಲ್ದಾರ್ ರಶ್ಮೀ ಎಸ್.ಆರ್., ಮಾಜಿ ಪುರಸಭಾ ಸದಸ್ಯ ದೇವದಾಸ ಶೆಟ್ಟಿ ಸಮಿತಿಯ ಗೌರವಾಧ್ಯಕ್ಷ ಪಿ. ಜಯರಾಮ ರೈ, ಸ್ವಾಗತ ಸಮಿತಿಯ ಅಧ್ಯಕ್ಷ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ ವೇದಿಕೆಯಲ್ಲಿದ್ದರು. ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಸ್ವಾಗತಿಸಿದರು. ಚಿಣ್ಣರಲೋಕ ಮೋಕೆದ ಕಲಾವಿದರ್ ಸೇವಾ ಟ್ರಸ್ಟ್ ನ ಸಂಸ್ಥಾಪಕ ಮೋಹನ್ ದಾಸ್ ಕೊಟ್ಟಾರಿ ಪ್ರಸ್ತಾವಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರರಾವ್,ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ತಮ ನಿರೂಪಿಸಿದರು.
ವೈಭವಯುತ ಮೆರವಣಿಗೆ: ಇದಕ್ಕು ಮೊದಲು ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಿಂದ ಕಲಾ ವೇದಿಕೆಯವರೆಗೆ ಜಾನಪದ ದಿಬ್ಬಣದ ವೈಭವಪೂರ್ಣ ಮೆರವಣಿಗೆ ನಡೆಯಿತು.ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್.ಮೆರವಣಿಗೆಯನ್ನು ಉದ್ಘಾಟಿಸಿ ಚಾಲನೆ ನೀಡಿದರು.ಬೊಂಬೆ ಕುಣಿತ, ಕುಣಿತ ಭಜನೆ,ಡೊಳ್ಳುಕುಣಿತ,ಬಣ್ಣದ ಕೊಡೆಗಳ ಸಾಲು, ಎನ್ ಸಿ ಸಿ ವಿದ್ಯಾರ್ಥಿಗಳ ಪಥ ಸಛಲನ,ನಾಸಿಕ್ ಬ್ಯಾಂಡ್, ಕೊಂಬು, ಕೇರಳದ ಚೆಂಡೆ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ಸಮಿತಿ ಪದಾಧಿಕಾರಿಗಳಾದ ಟಿ.ಸೇಸಪ್ಪ ಮೂಲ್ಯ, ಎಚ್.ಕೆ.ನಯನಾಡು, ಮಂಜು ವಿಟ್ಲ,ಪ್ರಭಾಕರ ಪ್ರಭು,ಮಹಮ್ಮದ್ ನಂದರಬೆಟ್ಟು, ಶಿವಪ್ರಸಾದ್ ಕೊಟ್ಟಾರಿ ಬಂಟ್ವಾಳ, ಗೋಪಾಲ ಅಂಚನ್,ಪ್ತಕಾಶ್ ಬಿ.ಶೆಟ್ಟಿ,ಮಧುಸೂಧನ್ ಶೆಣೈ ,ಮೊಹಮ್ಮದ್ ನಂದಾವರ ಮೊದಲಾದವರಿದ್ದರು.







