ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.  ಟ್ರಸ್ಟ್  ಬಂಟ್ವಾಳ ಬಿ.ಸಿ.ರೋಡ್ ವಲಯ ಹಾಗೂ ಸೆಲ್ಕೋ ಸೋಲಾರ್ ಲೈಟ್, ಫ್ರೈ. ಲಿ ನ ಜಂಟಿ ಆಶ್ರಯದಲ್ಲಿ  ಕುರಿಯಾಳ ಒಕ್ಕೂಟದ ದುರ್ಗಾ ನಗರದ ಸಮಾಜ ಮಂದಿರದಲ್ಲಿ ಸೋಲಾರ್ ಜೀವನಾಧರಿತ ಸ್ವದ್ಯೋಗ ಮಾಹಿತಿ ಕಾರ್ಯಕ್ರಮ ನಡೆಯಿತು.

IMG-20191222-WA0086  ಕಾರ್ಯಕ್ರಮ ವನ್ನು ಕುರಿಯಾಳ ಒಕ್ಕೂಟ ಹಾಗೂ ಬಿ‌.ಸಿ.ರೋಡ್ ವಲಯದ ಅಧ್ಯಕ್ಷ ಶೇಖರ ಸಾಮಾನಿ ಉದ್ಘಾಟಿಸಿ ಶ್ರೀ ಕ್ಷೇ. ಧ. ಗ್ರಾ. ಯೋಜನೆ ಕೇವಲ ಸಂಘ ದ ಸದಸ್ಯರಿಗೆ ಸಾಲದ ವ್ಯವಹಾರ ಮಾತ್ರವಲ್ಲ,ಸಂಘದ ಸದಸ್ಯರು ಸಂಘಕ್ಕೆ ಸೇರಿ ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿಗಳಾಗಿ ಬದಕಲು ಅವಕಾಶ ಮಾಡಿ ಕೊಡಲು ಹಲವಾರು ಉತ್ತಮ ಮಾಹಿತಿಗಳನ್ನು  ನೀಡುತಿದ್ದು, ಸದಸ್ಯರು ಇದರ ಸದುಪಯೋಗ ಪಡೆದು ಕೊಳ್ಳುವಂತೆ  ಕರೆ ನೀಡಿದರು. ತಾಲೂಕಿನ ಕೃಷಿ ಮೇಲ್ವಿಚಾರಕರಾದ ಜನಾರ್ದನರವರು ಸೋಲಾರ್  ಉಪಯೋಗಿಸುವುದರಿಂದ ಆಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಸೆಲ್ಕೋ ಸೋಲಾರ್ ನಾ ರವೀನಾ ಕುಲಾಲ ಅವರು ಸೋಲಾರ್ ನಲ್ಲಿ ಕೇವಲ ಲೈಟ್ ಮಾತ್ರ ಅಲ್ಲ 61ಬಗೆಯ ಉಪಯೋಗವಿದೆ ಎಂದರು.  ವಲಯದ ಮೇಲ್ವಿಚಾರಕರಾದ ಕೇಶವ ಕೆ ಕಾರ್ಯಕ್ರಮ ಅನುಷ್ಠಾನ ದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿ ನಾಗೇಶ್ ಉಪಸ್ಥಿತರಿದ್ದರು   ಒಕ್ಕೂಟದ ಸೇವಾ ಪ್ರತಿ ನಿಧಿ ಅಮಿತಾ ಸ್ವಾಗತಿಸಿ,  ವಂದಿಸಿದರು.

By suddi9

Leave a Reply

Your email address will not be published. Required fields are marked *