ಬಂಟ್ವಾಳ: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಕಾರ್ಯ ಶ್ಲಾಘನೀಯವಾಗಿದ್ದು. ಈ ನಿಟ್ಟಿನಲ್ಲಿ ಬಂಟ್ವಾಳ ಮಜಿ ಸರಕಾರಿ ಶಾಲೆಯೊಂದಿಗೆ ಕೈಜೋಡಿಸಿದ ಲಯನ್ಸ್ ಕ್ಲಬ್ ನ ಸೇವಾಮನೋಭಾವ ಅಭಿನಂದನೀಯವಾಗಿದೆ ಎಂದು ಲಯನ್ಸ್ ಜಿಲ್ಲಾ 317 -ಡಿ, ಇದರ ಉಪರಾಜ್ಯಪಾಲರಾದ ವಸಂತ ಕುಮಾರ್ ಶೆಟ್ಟಿ ಅವರು ಹೇಳಿದರು. ವೀರಕಂಭ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಇದರ ವತಿಯಿಂದ ಪ್ರಾರಂಭವಾದ ಸ್ಮಾರ್ಟ್ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮಾತನಾಡಿ ಬಾಲ್ಯ ದಲ್ಲಿ ಮಕ್ಕಳ ಪ್ರತಿಭೆ ಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು. ಮಕ್ಕಳ ಕಲಿಕೆಗೆ ಪೂರಕವಾದ ವ್ಯವಸ್ಥೆ ಮಾಡಿದರೆ ಯಾವ ಸರಕಾರಿ ಶಾಲೆಗಳು ಮುಚ್ಚಲು ಸಾಧ್ಯವಿಲ್ಲ ಎಂದರು. .ಬಂಟ್ವಾಳ ಜೀವವಿಮಾ ನಿಗಮದ ಅಸಿಸ್ಟೆಂಟ್ ಮೆನೇಜರ್ ಎಸ್ ಎಲ್ ಶ್ರೀಪಾದರವರು ಮಾತನಾಡಿ ವಿಧ್ಯಾರ್ಥಿ ಯಾಗಿದ್ದಾಗ ತಾನು ಕಲಿತು ಬೆಳೆಸಿದ ಗುಣಗಳಿಂದ ಆತ್ಮವಿಶ್ವಾಸ ದ ಮೂಲಕ ಅವಕಾಶಗಳನ್ನು ಪಡೆದು ಯಶಸ್ಸು ಪಡೆಯಲು ಸಾಧ್ಯ ಎಂದರು.
ಲಯನ್ ದಾಮೋದರ ಬಿ ಎಂ,ಲಯನ್ಸ್ ಉಪಾಧ್ಯಕ್ಷ ಕೃಷ್ಣ ಶ್ಯಾಮ್, ಸದಸ್ಯರುಗಳಾದ ರಮೇಶ್ ಕುಲಾಲ್, ರಾಘವೇಂದ್ರ ಕಾರಂತ್, ಪ್ರಮೀಳಾ ಶ್ರೀನಿವಾಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ ವೀರಕಂಭ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು ವೇದಿಕೆಯಲ್ಲಿದ್ದರು. ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಪ್ರಸ್ತಾವಿಸಿ,ಸ್ವಾಗತಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿ.ಕೊನೆಯಲ್ಲಿ ವಂದಿಸಿದರು.ಶಾಲಾ ಶಿಕ್ಷಕಿಯರುಸಹಕರಿಸಿದರು.


