ಸುರತ್ಕಲ್:  ನಾಫ್ತಾ ರಾಸಾಯನಿಕವನ್ನು ಕೇಂದ್ರ ಸರಕಾರ ನಿಷೇಧಿಸಿರುವ ಕಾರಣ ಪಣಂಬೂರಲ್ಲಿರುವ ಎಂಸಿಎಫ್ ರಸಗೊಬ್ಬರ ಕಾರ್ಖಾನೆ ಮುಚ್ಚುವ ಹಂತಕ್ಕೆ ಬಂದಿರುವುದನ್ನು ಪ್ರತಿಭಟಿಸಿ ಅಲ್ಲಿನ ಕಾರ್ಮಿಕರಿಂದ ಪ್ರತಿಭಟನೆ ವ್ಯಕ್ತವಾಯ್ತು.

1mcf1

1mcf2

ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡಿದ ಮಂಗಳ ಎಂಸಿಎಫ್ ವರ್ಕಸ್ ಸ್ ಯೂನಿಯನ್ ಅಧ್ಯಕ್ಷ ಕೆ ಎನ್ ಸೂರ್ಯನಾರಾಯಣ ಅವರು, ನಾಫ್ತಾ ಅಧಾರಿತ ರಸಗೊಬ್ಬರ ಸ್ಥಾವರಗಳಲ್ಲಿ ಪರಿಸರಮಾಲಿನ್ಯ ವಾಗುತ್ತಿದೆ ಎಂಬ ಕಾರಣ ನೀಡಿ ಉತ್ಪಾದನೆ ಸ್ಥಗಿತಕ್ಕೆ ಕೇಂದ್ರ ಸರಕಾರ ಸೂಚಿಸಿದೆ. ಇದರಿಂದ  ಪಣಂಬೂರಿನಲ್ಲಿರುವ ಎಂಸಿಎಫ್ ಅ.1. ಬುಧವಾರರಿಂದ ಉತ್ಪಾದನೆ ಸ್ಥಗಿತ ಗೊಳಿಸಿದೆ. ಈ ಕಾರಣದಿಂದ ಇಲ್ಲಿನ ಸುಮಾರು 2500 ಕಾರ್ಮಿಕರು ಬೀದಿಪಾಲಾಗುವ ಆತಂಕ ಉಂಟಾಗಿದೆ  ಎಂದು ಆತಂಕ ವ್ಯಕ್ತಪಡಿಸಿದರು.

ಅಂದಿನ ಯುಪಿಎ ಸರಕಾರ ನಾಫ್ತಾ ರಾಸಾಯನಿಕದಿಂದ ಪರಿಸರ ಹಾಳಾಗುತ್ತದೆ ಎಂದು ದೇಶದಲ್ಲಿ ನಿಷೇಧಿಸಿದ್ದರು. ಆದರೆ ಇದೀಗ ಕೇಂದ್ರದಲ್ಲಿ ಎನ್ ಡಿ ಎ ಸರಕಾರ ಆಡಳಿತದಲ್ಲಿದ್ದು, ರೈತರಿಗೆ ರಸಗೊಬ್ಬರದಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂಬ ಕಾರಣ ನೀಡಿ ಅದನ್ನು ಮುಚ್ಚಲು ಸೆ.30ರವರೆಗೆ ಗಡುವು ವಿಧಿಸಿತ್ತು. ಆದರೆ ನಿನ್ನೆಗೆ ಅದರ ಗಡುವುದು ಮುಕ್ತಾಯಗೊಂಡಿರುವುದರಿಂದ ಕಂಪೆನಿ ಬಾಗಿಲು ಮುಚ್ಚಲು ಸಜ್ಜಾಗಿದೆ. ಈ ಕಾರಣದಿಂದ ಎಂಸಿಎಫ್ ಕಾರ್ಮಿಕರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

 

By suddi9

Leave a Reply

Your email address will not be published. Required fields are marked *