ಬಂಟ್ವಾಳ: ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಗಡಿ ಭಾಗವಾದ ಹೊಕ್ಕಾಡಿಗೋಳಿ ಜಿಲ್ಲಾ ಕಂಬಳ ಸಮಿತಿಯ ಈ ಸಾಲಿನ ಎರಡನೇ ಕಂಬಳವಾದ ವೀರ- ವಿಕ್ರಮ ಜೋಡುಕರೆ ಕಂಬಳ ರವಿವಾರ ಸಂಪನ್ನವಾಗಿದೆ.

ಈ ಕಂಬಳ ಕೂಟದಲ್ಲಿ ಒಟ್ಟು 142 ಜೊತೆ ಕೋಣಗಳು ಭಾಗವಹಿಸಿದ್ದು, ಒಟ್ಟು ಆರು ವಿಭಾಗದಲ್ಲಿ ಸ್ಪರ್ಧೆ ನಡೆದಿದೆ. ಅವುಗಳ ಫಲಿತಾಂಶ ಈ ಕೆಳಗಿನಂತಿದೆ.
ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ಅಭಯ್ ನವೀನ್ ಚಂದ್ರ ಆಳ್ವ (6.5 ಕೋಲು ನಿಶಾನೆ)
ಅಡ್ಡ ಹಲಗೆ ವಿಭಾಗದಲ್ಲಿ
ಪ್ರಥಮ: ಆಲದ ಪದವು ಮೆಗಿನಮನೆ ಶುಭ್ರತ್ ವರುಣ್ ಶೆಟ್ಟಿ,ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
ಹಗ್ಗ ಹಿರಿಯ ವಿಭಾಗದಲ್ಲಿ
ಪ್ರಥಮ: ಮಾಳ ಆನಂದ ನಿಲಯ ಶೇಖರ್ ಆನಂದ್ ಶೆಟ್ಟಿ,ದ್ವಿತೀಯ: ಮೂಡಬಿದಿರೆ ಕರಿಂಜೆ ವಿನು ವಿಶ್ವನಾಥ್ ಶೆಟ್ಟಿ
ಹಗ್ಗ ಕಿರಿಯ ವಿಭಾಗದಲ್ಲಿ
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ,ದ್ವಿತೀಯ: ನಕ್ರೆ ಮಹೋದರ ನಿವಾಸ ಇಶಾನಿ ತುಕ್ರ ಭಂಡಾರಿ
ನೇಗಿಲು ಹಿರಿಯ ವಿಭಾಗದಲ್ಲಿ
ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ,
ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ್ ಸಾಲ್ಯಾನ್
ನೇಗಿಲು ಕಿರಿಯ ವಿಭಾಗದಲ್ಲಿ
ಪ್ರಥಮ:ಪನೋಳಿಬೈಲು ಭಂಡಾರಮನೆ ಶಿವಾನಂದ ಕುಲಾಲ್,ದ್ವಿತೀಯ: ಸಿದ್ದಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ ಬಹುಮಾನ ಪಡೆದಿದ್ದಾರೆ. ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರಂಬೋಡಿ ಗ್ರಾಪಂ ಅಧ್ಯಕ್ಷ ಪ್ರಭಾಕರ ಹುಲಿಮೇರು ವಹಿಸಿದ್ದು,ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷ ದಿನೇಶ್ ಶಾಂತಿ ಸುಂದರ್,ರಾಯಿ ಗ್ರಾಪಂ ಅಧ್ಯಕ್ಷ ದಯಾನಂದ ಸಪಲ್ಯ,ಮಾಜಿ ತಾಪಂ ಸದಸ್ಯ ಗೋಪಾಲಕೃಷ್ಣ ಚೌಟ,ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ,ಗೌರವಾಧ್ಯಕ್ಷ ಸಂಜೀವ ಶೆಟ್ಟಿ,ಗೌರವ ಸಲಹೆಗಾರರಾದ ಸುರೇಶ್ ಶೆಟ್ಟಿ,ಭಾಬು ರಾಜೇಂದ್ರ ಶೆಟ್ಟಿ,ಕಿರಣ್ ಕುಮಾರ್,ಪದಾಧಿಕಾರಿಗಳಾದ ಎಚ್.ಹರೀಶ್,ಸಂದೇಶ್ ಶೆಟ್ಟಿ,ಪುಷ್ಪರಾಜ್ ಜೈನ್,ಹರಿಪ್ರಸಾದ್ ಶೆಟ್ಟಿ , ತೀರ್ಪು ಗಾರರು ಮೊದಲಾದವರಿದ್ದರು.
