ವಿಟ್ಲ: ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗ ಸಮಿತಿ ಮತ್ತು ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಸಹಯೋಗದೊಂದಿಗೆ ಶ್ರೀ ಸಿದ್ಧಿಗಣಪತಿ ಸಹಿತ ವಿದ್ಯಾ ಸರಸ್ವತಿ ಮಹಾಯಾಗವು ಡಿ.29 ರಂದು  ಭಾನುವಾರ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಲಿದೆ.SHV_1346

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತದಾರರಾದ ಭವಾನಿಶಂಕರ ಕಂಡ್ಲೂರು ಬಿಡುಗಡೆ ಮಾಡಿದರು. ಯಾಗ ಸಮಿತಿ ಗೌರವಾಧ್ಯಕ್ಷ ಸದಾಶಿವ ಆಚಾರ್ಯ, ಬಾಲಗೋಕುಲ ಸಮಿತಿ ಗೌರವಾಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ ವೇದಿಕೆಯಲ್ಲಿದ್ದರು. ಮಂಜುನಾಥ ಪೈ ಪ್ರಾರ್ಥಿಸಿದರು. ಯಾಗ ಸಮಿತಿ ಅಧ್ಯಕ್ಷ ರಾಘವೇಂದ್ರ ಪೈ ಪ್ರಸ್ತಾವಿಸಿ ಸ್ವಾಗತಿಸಿದರು. ವಿನಯ ಆಲಂಗಾರು ವಂದಿಸಿದರು. ಪರಮೇಶ್ವರ ಆಚಾರ್ಯ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *