ಬಂಟ್ವಾಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಸ್ಡಿಪಿಐ ಬೋಳಂತೂರು, ಮಂಚಿ ಮತ್ತು ಕೊಳ್ನಾಡು ಗ್ರಾಮ ಸಮಿತಿ ಒಕ್ಕೂಟದಿಂದ ದ.ಕ ಜಿಲ್ಲಾ ಮುಖ್ಯಕಾರ್ಯನಿರ್ವಾಹಣಾ ಅಧಿಕಾರಿ ಡಾ. ಸೆಲ್ವಮಣಿ ಆರ್. ಅವರಿಗೆ ಮನವಿ ಮೂಲಕ ಒತ್ತಾಯಿಸಲಾಯಿತುಗೋಳ್ತಮಜಲು-ಮಂಚಿ ನಡುವಿನ ರಸ್ತೆಯು ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅದಲ್ಲದೆ, ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಮತ್ತು ದಾದಿಯರನ್ನು ಪೂರ್ಣಾವಧಿಯಾಗಿ ನೇಮಕ ಮಾಡುವಂತೆ ಮನವಿಯಲ್ಲಿ ವಿನಂತಿಸಲಾಯಿತು.

ರಸ್ತೆಯ ದುರಸ್ತಿ, ಇತರ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವುದಾಗಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಪ್ ಮಂಚಿ, ಬೋಳಂತೂರು ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಮಾಡದ ಬಳಿ, ಮಂಚಿ ಗ್ರಾಮ ಸಮಿತಿ ಅಧ್ಯಕ್ಷ ನವಾಝ್ ಕೋಡಿಬೈಲ್, ಕೊಳ್ನಾಡು ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಯಾದ ಬಶೀರ್ ಕೊಳ್ನಾಡು, ಸಿಎಫ್ಐ ರಾಷ್ಟ್ರೀಯ ಉಪಾಧ್ಯಕ್ಷ ತಪ್ಸೀರ್ ಬೋಳಂತೂರು, ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯರಾದ ಪೈಝಲ್ ಮಂಚಿ, ಗ್ರಾಮ ಸಮಿತಿ ಸದಸ್ಯರಾದ ಫಾರೂಕ್ ಸಾಲೆತ್ತೂರು, ನವಾಝ್ ಬೋಳಂತೂರು ಉಪಸ್ಥಿತರಿದ್ದರು.
