ಬಂಟ್ವಾಳ : ಬಂಟ್ವಾಳ ಬ್ಯಾಡ್ಮಿಂಟನ್ ಕ್ಲಬ್ ನ ವತಿಯಿಂದ ಪಾಣೆಮಂಗಳೂರಿನ ಜೆ.ಕೆ. ಕಾಂಪ್ಲೆಕ್ಸ್ ಮೇಲಂತಸ್ತಿನಲ್ಲಿ ತಾಲೂಕಿನಲ್ಲೇ ಪ್ರಥಮವಾಗಿ ನಿರ್ಮಿಸಲಾದ ಶಟಲ್ ಬ್ಯಾಡ್ಮಿಂಟನ್ ಸಿಂಥೆಟಿಕ್ ಅಂಗಣವನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಇತ್ತೀಚೆಗೆ ಉದ್ಘಾಟಿಸಿದರು.

ಬಂಟ್ವಾಳ ಪುರಸಭಾ ಸದಸ್ಯ ಎ ಗೋವಿಂದ ಪ್ರಭು, ಸ್ಥಳೀಯ ವೈದ್ಯರುಗಳಾದ ಡಾ. ವಿಶ್ವನಾಥ ನಾಯಕ್, ಡಾ. ಎಂ.ಎಂ. ಶರೀಫ್, ಉದ್ಯಮಿಗಳಾದ ಹಾಜಿ ಮುಹಮ್ಮದ್ ಅಲಿ ಎ.ಆರ್., ಹಾಜಿ ಪಿ. ಮುಹಮ್ಮದ್ ರಫೀಕ್, ಖಲೀಲ್ ಬಂಟ್ವಾಳ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಾಮಣ್ಣ ಶೆಟ್ಟಿ, ಜೆ.ಕೆ. ಕಾಂಪ್ಲೆಕ್ಸ್ ಮಾಲಕಿ ಕುಮುದಾ ಜೆ. ಕುಡ್ವ, ವಂದಿತಾ ಜೆ. ಕುಡ್ವ ಭಾಗವಹಿಸಿದ್ದರು. ಇದೇ ವೇಳೆ ಅಂಗಣಕ್ಕೆ ಸ್ಥಳದಾನ ಮಾಡಿದ ಕಾಂಪ್ಲೆಕ್ಸ್ ಮಾಲಕಿ ಕುಮುದಾ ಜೆ. ಕುಡ್ವ ಅವರನ್ನು ಬಿಬಿಸಿ ವತಿಯಿಂದ ಸನ್ಮಾನಿಸಲಾಯಿತು.

ಬಿಬಿಸಿ ಪದಾಧಿಕಾರಿಗಳಾದ ಹನೀಫ್ ಕೋಸ್ಟಲ್, ಮುಹಮ್ಮದ್ ವೈ.ಕೆ., ಶಮೀರ್ ಎ.ಆರ್., ಫಯಾಝ್ ಮಾಸ್ಟರ್, ಮುಸ್ತಫಾ ಕರ್ನಾಟಕ, ಹಫೀಝ್ ಎಚ್.ಎಚ್., ಮುಸ್ತಫಾ ಶೂ ಮಾರ್ಟ್, ಮುಹಮ್ಮದ್ ಅಲಿ ಬಂಟ್ವಾಳ, ಶಾಕಿರ್ ಶೂ ಇಂಡಿಯಾ ಮೊದಲಾದವರು ಉಪಸ್ಥಿತರಿದ್ದರು.


