ಬಂಟ್ವಾಳ: ಸಂಘ ಸಂಸ್ಥೆಗಳ ಮತ್ತು ದಾನಿಗಳ ಸಹಕಾರ ಹಾಗೂ ವಿ.ಹಿಂ.ಪ.ಮುಖಂಡ ಲೋಹಿತ್ ಪಣೋಲಿಬೈಲು,ಸಾಮಾಜಿಕ ಕಾರ್ತಕರ್ತ ರವಿಚಂದ್ರ ನಗ್ರಿ ಅವರ ನೇತೃತ್ವದಲ್ಲಿ ಮೀನಾಕ್ಷಿ ಗೋವಿಂದ ಕುಲಾಲ್ ನಗ್ರಿ ರವರಿಗೆ 4.50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿಕೊಡಲಾದ ಮನೆಯನ್ನು ಭಾರತ ಮಾತೆಯ ಭಾವಚಿತ್ರ ನೀಡುವ ಮೂಲಕ ಹಸ್ತಾಂತರಿಸಲಾಯಿತು.
ಸಜೀಪ ಜನಸೇವಾ ಟ್ರಸ್ಟ್ ನ ಅಧ್ಯಕ್ಷ ಯಶವಂತ ದೇರಾಜೆ, ಸಜೀಪ ಶ್ರೀದುರ್ಗಾ ಪರಮೇಶ್ವರೀ ಭಕ್ತವೃಂದದ ಅಧ್ಯಕ್ಷ ನವೀನ್ ಸುವರ್ಣ ಮಿತ್ತಕಟ್ಟ,ಉದ್ಯಮಿ ಶ್ರೀಕಾಂತ್ ಶೆಟ್ಟಿ ಸಂಕೇಶ,ಸಜೀಪಮೂಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ಬೆಳ್ಚಾಡ, ಕಲ್ಲಡ್ಕ ಸ್ನೇಹ ಮಿಲನ್ ಸಂಚಾಲಕ ಪುರುಷೋತ್ತಮ ಪೂಜಾರಿ ಪಡೀಲ್, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ಸಹ ಕಾರ್ಯದರ್ಶಿ ಲೋಹಿತ್ ಪಣೋಲಿಬೈಲ್,ಸಾಮಾಜಿಕ ಕಾರ್ಯಕರ್ತ ರವಿಚಂದ್ರ ನಗ್ರಿ,ಸ್ಥಳೀಯ ಹಿರಿಯರಾದ ಗುರುವಪ್ಪ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಹಿಂದೂ ಸಂಘಟನೆಯ ಸ್ಥಳೀಯ ಕಾರ್ಯಕರ್ತರು ಭಾಗವಹಿಸಿದ್ದರು.