ಮೂಡುಬಿದಿರೆ:ತಿಬ್ಬಸ್ ಗ್ರೂಪ್-ಫ್ಯಾಶ್‍ಜೋನ್ ಆಶ್ರಯದಲ್ಲಿ ಮೈಸೂರಿನಲ್ಲಿ ನಡೆದ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ 2019 ಸ್ಪರ್ಧೆಯಲ್ಲಿ ಮೂಡುಬಿದಿರೆ ಎಂ.ಜೆ. ಸ್ಟೆಪ್‍ಅಪ್ ಸಂಸ್ಥೆಯ ನೃತ್ಯ ನಿರ್ದೇಶಕ ಎಸ್.ಅನೀಶ್ ಮರಿಯಾಡಿ ಹಾಗೂ ಸಂಸ್ಥೆಯ ಮೂರು ಮಂದಿ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.

ಎಸ್.ಅನೀಶ್ ಅವರು ಸ್ಪರ್ಧೆಯಲ್ಲಿ ಮಿಸ್ಟರ್ ಸೌತ್ ಕರ್ನಾಟಕ ವಿನ್ನರ್ ಆಗಿದ್ದಾರೆ. ಅಮೃತಾ ಆರ್. ಬರ್ಮನ್ `ಇಂಡಿಯನ್ ಮಿಸ್ ಟೀನ್ ಫ್ಯೂಚರ್ ರೈಸಿಂಗ್ ಸ್ಟಾರ್’ 2019 ವಿನ್ನರ್ ಆಗಿದ್ದಾರೆ. ಇದೇ ವಿಭಾಗದಲ್ಲಿ ಪ್ರಥ್ವಿ ಆರ್.ಶೆಟ್ಟಿ ರನ್ನರ್ ಪ್ರಶಸ್ತಿ ಗಳಿಸಿದ್ದಾರೆ. ಇಂಡಿಯನ್ ಲಿಟ್ಲ್ ಪ್ರಿನ್ಸ್ ವಿಭಾಗದಲ್ಲಿ ಮನಸ್ವಿ ಎಸ್.ಶೆಟ್ಟಿ ರನ್ನರ್ ಹಾಗೂ ಬೆಸ್ಟ್ ಅಟಿಡ್ಯೂಡ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇದೇ ಸಂಸ್ಥೆಯ ವಿದ್ಯಾರ್ಥಿನಿ, ಕಳೆದ ಸಾಲಿನ ನ್ಯಾಶನಲ್ ಐಕಾನ್ ಹಂಟ್ 2019 ಸ್ಪರ್ಧೆಯ ವಿಜೇತೆ ಸಿಂಚನಾ ಎಸ್.ಕೋಟ್ಯಾನ್ ಸ್ಪರ್ಧೆಯ ರಾಯಭಾರಿಯಾಗಿ ಭಾಗಹಿಸಿದರು. ತಿಬ್ಬಸ್ ಗ್ರೂಪ್‍ನ ಸ್ಥಾಪಕ ನಾಗೇಶ್ ಡಿ.ಸಿ ಪ್ರಶಸ್ತಿ ಪ್ರದಾನ ಮಾಡಿದರು.
