ಕಲ್ಲಡ್ಕ: ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ಶಾಲಾ ಕೈತೋಟದಲ್ಲಿ ಕೃಷಿ ಸಂಘದ ವತಿಯಿಂದ ವಿದ್ಯಾರ್ಥಿಗಳು ತಾವೇ ಬೆಳೆದ 16 ಕೆ.ಜಿ ಸುವರ್ಣಗಡ್ಡೆಯನ್ನು ಕಟಾವು ಮಾಡಿದರು. ಈ ಗಡ್ಡೆಯನ್ನು ತಮ್ಮ ಶಾಲಾ ಮಧ್ಯಾಹ್ನದ ಭೋಜನಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಹಾಗೂ ಅಧ್ಯಾಪಕರಾದ ಸುಮಂತ್ ಆಳ್ವ ಹಾಗೂ ಶಾಲಾ ಮಕ್ಕಳ ಕೃಷಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
