ಫರಂಗಿಪೇಟೆ : ನಿಷ್ಟುರವಾದಿಗಳು , ಬಡವ ಬಲ್ಲಿದ ನೆಂಬ ಬೇದ ವಿಲ್ಲದೆ ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದವರು , ಸ್ವಾಭಿಮಾನದ ಬದುಕು ನಡೆಸಿದವರು . ನ್ಯಾಯ ಸಂದಾನಗಳನ್ನು ಮಾಡುತಿದ್ದ ಸಾಮಾನಿಗಳು ಎಂದೂ ನ್ಯಾಯ ನಿಷ್ಠೆಗೆ ವಿರುದ್ಧ ವಾಗಿ ರಾಜಿ ಮಾಡಿಕೊಂಡವರಲ್ಲ . ರಾಜಕೀಯ , ಧಾರ್ಮಿಕ , ಕ್ರೀಡೆ , ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಎಂದು ಅವರ ಒಡನಾಡಿಯಾಗಿದ್ದ ಕುರಿಯಾಳ ಮುಂಡಡ್ಕ ಗುತ್ತು ರತ್ನಾಕರ ಶೆಟ್ಟಿ ಯವರು ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಪ್ರಕಾಶ್ಚಂದ್ರ ರೈ ದೇವಸ್ಯ , ವಿಠ್ಠಲ್ ಶೆಟ್ಟಿ ನೀರೊಲ್ಬ್ , ಕೃಷ್ಣಕುಮಾರ್ ಪೂಂಜಾ , ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ , ಐತಪ್ಪ ಆಳ್ವ ಸುಜೀರು ಗುತ್ತು , ಜಯರಾಜ್ ಕರ್ಕೇರಾ, ಶಶಿರಾಜಶೆಟ್ಟಿ ಕೊಳಂಬೆ , ಪ್ರಕಾಶ್ ಮಡಿವಾಳ ಕಿದೆ ಬೆಟ್ಟು , ಮೋಹನ ಕುಲಾಲ್ ಫರಂಗಿಪೇಟೆ , ದೇವದಾಸ್ ಶೆಟ್ಟಿ ಬೆಜ್ಜ ಸಾರೊಲ್ಯ , ಪುರುಷ ಸಾಲ್ಯಾನ್ ಕಳ್ಳಿಗೆ , ಸೋಮಪ್ಪ ಕೋಟ್ಯಾನ್ , ದೇವದಾಸ್ ಶೆಟ್ಟಿ ಕೊಡ್ಮಾಣ್ , ಸುಂದರ ಶೆಟ್ಟಿ ಕಲ್ಲ ತಡಮೆ , ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ , ಎಂ ಆರ್ ನಾಯರ್ ತುಂಬೆ , ಚಂದ್ರಹಾಸಶೆಟ್ಟಿ ರಂಗೋಲಿ , ಆನಂದ ಶೆಟ್ಟಿ ಗೋವಿಂ ತೋಟ , ದಿನೇಶ್ಚಂದ್ರ ಬರ್ಕೆ , ಲತೀಶ್ ಶೆಟ್ಟಿ ಚಾವಡಿಮನೆ ಅದ್ಯಪಾಡಿ , ಚೇತನ್ ಎನ್ ಶೆಟ್ಟಿ ಎಳತ್ತೂರ್ , ಗೋಪಾಲಕೃಷ್ಣ ಸುವರ್ಣ ತುಂಬೆ , ಮೃತರ ಮಕ್ಕಳಾದ ಪುಷ್ಪರಾಜ್ ಸಾಮಾನಿ , ಶಿವರಾಜ್ ಸಾಮಾನಿ ಉಪಸ್ಥಿತರಿದ್ದರು ತೇವು ತಾರಾನಾಥ ಕೊಟ್ಟಾರಿ ಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು , ಪುಂಚಮೆ ಪದ್ಮನಾಭ ಶೆಟ್ಟಿ ಯವರು ವಂದಿಸಿದರು.
