ಮಂಗಳೂರು : ಕಳೆದ ಹಲವಾರು ವರ್ಷಗಳಿಂದ ಹಿಂದೂ – ಮುಸ್ಲಿಂ ಸಾಮರಸ್ಯಕ್ಕೆ ಧಕ್ಕೆಯಾಗಿದ್ದ ವಿವಾದಿತ ಅಯೋಧ್ಯಾ ಭೂಒಡೆತನದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠವು ಶನಿವಾರದಂದು ಪ್ರಕಟಿಸಿದೆ. ಪೀಠದಲ್ಲಿದ್ದ ಐವರು ನ್ಯಾಯಾಧೀಶರ ಪೈಕಿ ಓರ್ವರು ದಕ್ಷಿಣ ಕನ್ನಡ ಜಿಲ್ಲೆಯವರೆಂದು ನಿಮಗೆ ತಿಳಿದಿದೆಯೇ..?

Untitled-1

ಹೌದು… ನ್ಯಾ. ಅಬ್ದುಲ್ ನಝೀರ್ ಅವರು ಕರ್ನಾಟಕ ರಾಜ್ಯದ ಕರಾವಳಿಯವರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿ ನಿವಾಸಿ ಫಕೀರ್ ಸಾಬ್ ಎಂಬವರ ಪುತ್ರರಾಗಿರುವ ನಝೀರ್ ಅವರು ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು ಬಳಿಕ ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರು.

By Suddi9

Leave a Reply

Your email address will not be published. Required fields are marked *