ಬಂಟ್ವಾಳ: ಆರು ಗ್ರಾಮ ವ್ಯಾಪ್ತಿಯ ಸರ್ವಋತು ಜಲಪೂರಣ ೧೯.೧೮ ಕೋಟಿ ರೂ. ವೆಚ್ಚದ ಮಾಣಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಲೋಕಾರ್ಪಣೆ ಶುಕ್ರವಾರ ನೆರವೇರಿತು. ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕಡೇಶ್ವಾಲ್ಯ ದೇವಳದ ಸಮೀಪ ನೇತ್ರಾವತಿ ನದಿಯಿಂದ ನೀರೇತ್ತವ ರೇಚಕ ಸ್ಥಾವರದಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. 
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿಪಂಜ, ಜಿಪಂ ಸದಸ್ಯರಾದ ಮಂಜುಳಾ ಮಾವೆ,ಕಮಾಲಾಕ್ಷಿ ಕೆ. ಪೂಜಾರಿ,ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಪಂ ಸದಸ್ಯರಾದ ಗೀತಾಚಂದ್ರಶೇಖರ್,ಆದಂಕುಂಞ, ಮಂಜುಳ ಕುಶಲ ಪೆರಾಜೆ, ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಎಸ್ .ಶೆಟ್ಟಿ, ಪೆರಾಜೆ ಗ್ರಾಪಂ ಅಧ್ಯಕ್ಷೆ ಪುಪ್ಪ,ಕಡೇಶ್ವಾಲ್ಯಗ್ರಾಪಂ ಅಧ್ಯಕ್ಷೆ ಶ್ಯಾಮಲ ಶೆಟ್ಟಿ,ನೆಟ್ಲಮುಡ್ನೂರು ಗ್ರಾಪಂ ಅಧ್ಯಕ್ಷೆ ವಿಜಯ,ಅನಂತಾಡಿ ಗ್ರಾಪಮ ಅಧ್ಯಕ್ಷ ಸನತ್ ಕುಮಾರ್ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ರಾಜ್ಯ ಬಾಲಭವನ ಸೊಸೈಟಿಯ ಮಾಜಿ ಅಧ್ಯಕ್ಷೆ ಸುಲೋಚನಾ ಭಟ್ ,ಜಿ.ಕೆ.,ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಗಣೇಶ್ ರೈ ಮಾಣಿ,ಪುಪ್ಪರಾಜ್ ಚೌಟ, ಎಪಿಎಂಸಿ ಮಾಜಿ ಅಧ್ಯಕ್ಷ ರೋನಾಲ್ಡ್ ಡಿಸೋಜ,ಆನಂದ ಎ. ಶಂಭೂರು ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಸೆಲ್ವಮಣಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪವಿಭಾಗ ಸಹಾಯಕ ಕಾ.ನಿ. ಇಂಜಿನಿಯರ್ ಮಹೇಶ್, ದ.ಕ.ಜಿ.ಪಂ.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಕಾರ್ಯ ನಿರ್ವಾಹಕ ಅಭಿಯಂತರರಾದ ಜಿ.ನರೇಂದ್ರ ಬಾಬು, ಪಂಚಾಯತ್ ರಾಜ್ ಎಇಇ ತಾರಾನಾಥ ಸಾಲಿಯಾನ್, ಸಹಾಯಕ ಎಂಜಿನಿಯರುಗಳಾದ ಕೆ.ಎನ್.ಅಜಿತ್, ಎನ್.ಪದ್ಮರಾಜ ಗೌಡ, ಕಿರಿಯ ಎಂಜಿನಿಯರುಗಳಾದ ಕೃಷ್ಣ ಮಾನಪ್ಪ, ಜಗದೀಶ್ಚಂದ್ರ, ರವಿಚಂದ್ರ ಮೊದಲಾದವರಿದ್ದರು. ಮಾಣಿ ಬಹುಗ್ರಾಮ ಸರ್ವಋತು ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ 60-4೦ ರಂತೆ ಕ್ರಮವಾಗಿ ಅನುದಾನದ ಒದಗಿಸಿದ್ದು,ಮಾಣಿ, ಪೆರಾಜೆ, ಅನಂತಾಡಿ, ನೆಟ್ಲಮುಡ್ನೂರು, ಕಡೇಶ್ವಾಲ್ಯ, ಬರಿಮಾರು ಗ್ರಾಮದಲ್ಲಿನ ಈಗಿರುವ ಜನಸಂಖ್ಯೆಯನ್ನು ಗಮನಿಸಿಕೊಂಡು ಯೋಜನೆ ರೂಪಿಸಲಾಗಿದೆ.
