ಬಂಟ್ವಾಳ : ಕಲ್ಲಿನ‌ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ  ಕಾರ್ಮಿಕನೋರ್ವನಿಗೆ ಟಿಪ್ಪರ್ ಲಾರಿಯೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಇರಾ ಎಂಬಲ್ಲಿ ಗುರುವಾರ ನಡೆದಿದೆ.ಮಂಜೇಶ್ವರದ ನಿವಾಸಿ, ಸೈಯದ್ ಸುಬಾನ್ (೩೯) ಮೃತ ಕಾರ್ಮಿಕ. ಇಂದು ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಮುಳೂರು ಎಂಬಲ್ಲಿ ವೀರಣ್ಣ ಕುಟ್ಟಿ ಎಂಬವರಿಗೆ ಸೇರಿದ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಟಿಪ್ಪರ್ ಲಾರಿಯು ಹಿಂಬದಿಯಿಂದ ಢಿಕ್ಕಿಯಾಗಿದೆ‌.
ಪರಿಣಾಮ ಸುಬಾನ್ ಕೋರೆಗೆ ಬಿದ್ದು ಮೃತಪಟ್ಟಿರುವುದಾಗಿ ಸಹೋದ್ಯೋಗಿ ಉಮರ್ ಎಂಬವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.ಸುಬಾನ್ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಸ್ಥಳೀಯರು ಪೊಲೀಸರಿಗೆ ಹೇಳಿಕೆ ನೀಡಿರುವುದಾಗಿ  ತಿಳಿದುಬಂದಿದೆ.ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

By suddi9

Leave a Reply

Your email address will not be published. Required fields are marked *