ಶ್ರೀನಿವಾಸಪುರ: ವೈ ಹೊಸಕೋಟೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮದ ದಲಿತ ಕುಟುಂಬಗಳು ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಪೂಜೆಗೆ ಹೋಗಿದ್ದ ಸಮಯದಲ್ಲಿ ಅರ್ಚಕ ಗ್ರಾಮದ ಸವರ್ಣೀಯರ ಕಾಣದ
ಕೈಗಳ ಕೈವಾಡದಿಂದ ನಮ್ಮನ್ನು ದೇವಸ್ಥಾನಕ್ಕೆ ಪ್ರವೇಶ ಮಾಡಲು ಅಡ್ಡಿ ಪಡಿಸಿದ್ದಾರೆಂದು ದಲಿತ ಕುಟುಂಬಗಳು ತಹಸೀಲ್ದಾರ್‍ರವರಿಗೆ ದೂರು ಸಲ್ಲಿಸಿದ್ದಾರೆ. ತಾಲ್ಲೂಕಿನ ಕಸಬಾ ಹೋಬಳಿಯ ನಂಬಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ವೈ ಹೊಸಕೋಟೆ ಗ್ರಾಮದ ದಲಿತ ಕುಟುಂಬಗಳ ಮಹಿಳೆಯರು ತಹಸೀಲ್ದಾರ್ ರವರಿಗೆ ತಾಲ್ಲೂಕಿನ ದಲಿತ ಸಂಘಟನೆಗಳ ಮುಖಂಡರ ಆಶ್ರಯದಲ್ಲಿ ಪ್ರಭಾರಿ ತಹಸೀಲ್ದಾರ್ ಕೆ. ಸುಜಾತ ರವರಿಗೆ ದೂರು ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತ ಮಹಿಳೆಯರು ಗ್ರಾಮದಲ್ಲಿ ಸುಮಾರು 200 ಕುಟುಂಬಗಳು ಇದ್ದು ಇವುಗಳ ಪೈಕಿ 60 ಕುಟುಂಬಗಳು ದಲಿತ ಕುಟುಂಬಗಳು ಇದ್ದು ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರುವ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಇತ್ತೀಚೆಗೆ ಪುನರ್ ಜೀರ್ಣೋದ್ದಾರವಾಗಿ ಹೊಸದಾಗಿ ದೇವಾಲಯ ನಿರ್ಮಾಣ ಮಾಡಿದ್ದು .

ದೀಪಾವಳಿ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ ಸಮಯದಲ್ಲಿ ಗ್ರಾಮದ ದೇವಸ್ಥಾನದ ಅರ್ಚಕರಾದ ವೇಣುಗೋಪಾಲಾಚಾರಿ ಬಿನ್ ಲೇಟ್ ಶ್ರೀನಿವಾಸಚಾರಿ ಇವರು ಗ್ರಾಮದ ಸವರ್ಣೀಯರ ಕೈವಾಡದಿಂದ ನಮ್ಮನ್ನು ದೇವಸ್ಥಾನ ಪ್ರವೇಶ ಮಾಡಲು ಬಿಡದೆ ನಮಗೆ ಅಡ್ಡಲಾಗಿ ಕುಳಿತುಕೊಂಡು ಪೂಜೆಯನ್ನು ಮಾಡಿಸದೆ ನಮಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ನಮಗೆ
ಸಂಭಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ದೇವಸ್ಥಾನಕ್ಕೆ ಪ್ರವೇಶ ಮಾಡಿಕೊಟ್ಟು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಡಬೇಕೆಂದು ಸಂಬಂಧಿಸಿದ ಅಧಿಕಾರಿಗಳನ್ನು
ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಮಹಿಳಾ ಮುಖಂಡರಾದ ರಾಮಾಂಜಮ್ಮ ರಾಜು ಮಂಜಲನಗರ ಚಂದ್ರಪ್ಪ, ವೈ. ಹೊಸಕೋಟೆ ದಲಿತ ಕುಟುಂಬಸ್ಥರಾದ ಆಂಜಮ್ಮ, ಕಾಂತಮ್ಮ, ಮಂಜುಳಮ್ಮ, ಆಂಜಲಮ್ಮ, ಸರಸ್ವತಮ್ಮ, ನೀಲಮ್ಮ ಮತ್ತಿತರರು ಹಾಜರಿದ್ದರು.
