ಬಂಟ್ವಾಳ: ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ  ಕಾವು ಅನಿತಾ ಹೇಮನಾಥ್ ಶೆಟ್ಟಿ ಅವರನ್ನೊಳಗೊಂಡ ಜನಪ್ರತಿನಿಧಿಗಳ ನಿಯೋಗ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಬುಧವಾರ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಂ.ಆರ್.ಪಿ.ಎಲ್  ಸಂಸ್ಥೆ    ವತಿಯಿಂದ ನಾಲ್ಕು ತಾಲೂಕಿನ ಸರಕಾರಿ ಆಸ್ಪತ್ರೆ ಗಳಿಗೆ  ಅಂಬ್ಯುಲೆನ್ಸ್ ಗಳನ್ನು ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಸಿದ ಬಳಿಕ ಆಸ್ಪತ್ರೆ ಯ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರಲ್ಲದೆ    ಪ್ರತಿ ವಾರ್ಡ್ ಗಳಿಗೆ ಬೇಟಿ ನೀಡಿ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು.

17-06-15-IMG-20191030-WA0030-768x364

ಈ ಸಂದರ್ಭದಲ್ಲಿ ಜಿ‌.ಪಂ.ಸದಸ್ಯರಾದ ಎಂ.ಎಸ್.ಮಹಮ್ಮದ್, ಮಂಜುಳಾ  ಮಾವೆ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ,ಸ್ಥಾಯಿಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪ ಪ್ರಭು,ವೈದ್ಯಾಧಿಕಾರಿ ಡಾ.ಸದಾಶಿವ ಮತ್ತಿತರರಿದ್ದರು.

 

 

By suddi9

Leave a Reply

Your email address will not be published. Required fields are marked *