ಬಂಟ್ವಾಳ: , ಅನಂತಾಡಿ ಕ್ರಿಕೆಟ್ ಕ್ಲಬ್ ನ ಅಶ್ರಯದಲ್ಲಿ ನಡೆದ ದೀಪಾವಳಿ ಹಬ್ಬದ ಕ್ರೀಡಾಕೂಟದಲ್ಲಿ ಬಾಬನಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ 28 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆ ಸುಜಾತ ಅವರನ್ನು ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ಅನಂತಾಡಿ ಯುವಕ ಮಂಡಲ ಕಿರಣ್ ಹೆಗ್ಡೆ , ,ಗೋಪಾಲಕೃಷ್ಣ ಬಾಬನಕಟ್ಟೆ ಶಾಲಾಭಿವೃದ್ಧಿ ಸಮಿತಿ ಗೋಪಾಲಕೃಷ್ಣ, ತಾಪಂ ಸದಸ್ಯೆ ಗೀತಾ ಚಂದ್ರಶೇಖರ,ಅನಂತಾಡಿ ಗ್ರಾಪಂ ಉಪಾಧ್ಯಕ್ಷೆ ಕವಿತಾಉಮೇಶ್ ಪೂಜಾರಿ, ಕ್ರಿಕೆಟ್ ಕ್ಲಬ್ ಅಧ್ಯಕ್ಷ ಹರೀಶ್ ಗೌಡ ಬಾಬನಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
