ಬಂಟ್ವಾಳ: ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆಯುಶ್ಮಾನ್ ಭಾರತ್ ನ ಫಲಾನುಭವಿಗಳೊಂದಿಗೆ ದೀಪಾವಳಿ ಆಚರಣಾ ವೈಶಿಷ್ಟಪೂರ್ಣ ಕಾರ್ಯಕ್ರಮ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆಯಿತು.ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದ.ಕ.ಜಿಲ್ಲೆಯಲ್ಲಿ 92ಸಾವಿರ ಮಂದಿ ಆಯುಶ್ಮಾನ್ ಭಾರತ್ ಕಾರ್ಡ್ ಪಡೆದುಕೊಂಡಿದ್ದು, ಎಂಟು ಸಾವಿರಕ್ಕೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.IMG-20191028-WA0048

ದೇಶದ ಪ್ರತಿಯೊಬ್ಬರು ಕೂಡ ಆರೋಗ್ಯವಂತರಾಗಿರಬೇಕು ಎಂಬುದೇ ಪ್ರಧಾನಿಯವರ ಚಿಂತನೆಯಾಗಿದ್ದು, ಜನರಿಕ್ ಹಾಗೂ ಆಯುಶ್ಮಾನ್ ಭಾರತ್ ಯೋಜನೆಯ ಮೂಲಕ ಸರಕಾರ ದೇಶದ ಜನರಿಗೆ ಆರೋಗ್ಯ ದ ಸವಲತ್ತನ್ನು ನೀಡಿದೆ ಎಂದು ಅವರುಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಜನರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಆಯುಶ್ಮಾನ್ ಭಾರತ್ ಯೋಜನೆಯ ಮೂಲಕ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡುವ ಯೋಚನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರದ್ದಾಗಿದ್ದು,ಅವರ ಕನಸಿನ
ಈ ಯೋಜನೆ ಯಶಸ್ವಿಯಾಗಿಲು ಅಧಿಕಾರಿಗಳ ಸಹಕಾರವು ಅಗತ್ಯವಿದೆ ಎಂದರು.

ಅಧಿಕಾರಿಗಳು ಈ ಯೋಜನೆಯ ಕುರಿತಂತೆ ಜನಸಾಮಾನ್ಯರಿಗೆ ಸಮಗ್ರವಾದ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು. ‌ಜಿಲ್ಲಾ ಆರೋಗ್ಯಾಧಿಕಾರಿ ಡಾ! ರಾಮಕೃಷ್ಣ ರಾವ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಜಿಪಂ ಸದಸ್ಯ ರವೀಂದ್ರ ಕಂಬಳಿ,ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ . ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಉಪಸ್ಥಿತರಿದ್ದರು.ಆಯುಶ್ಮಾನ್ ಭಾರತ್ ಜಿಲ್ಲಾ ಸಂಯೋಜನಾಧಿಕಾರಿ ಸಚ್ಚಿದಾನಂದ ಎಂ.ಎಲ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *