ಫರಂಗಿಪೇಟೆ : ದಂತ ಭಾಗ್ಯ ಯೋಜನೆ ದೇಶ ದಲ್ಲೇ ಪ್ರಥಮ . ವಿಶೇಷ ವಾಗಿ ವೃದ್ಧರಿಗೆ ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರ ದ ಪಚನ ಕ್ರಿಯೆ ಗೆ ಕೃತಕ  ದಂತ ವನ್ನು ಒದಗಿಸಿಕೊಡುವಲ್ಲಿ ದಂತ ಭಾಗ್ಯ ಯೋಜನೆ ರಾಜ್ಯದಲ್ಲಿ ಯಶಸ್ವಿ ಯಾಗಿದೆ ಎಂದು ಮಾಜಿ ಆರೋಗ್ಯ ಸಚಿವ , ಮಂಗಳೂರು ಶಾಸಕರಾದ ಯು ಟಿ ಖಾದರ್ ರವರು  ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಯಿ ಆರೋಗ್ಯ ನೀತಿ( NOHP), ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಮಹಾವಿದ್ಯಾಲಯ ದೇರಳಕಟ್ಟೆ ಮತ್ತು ಸೇವಾಂಜಲಿ ಆರೋಗ್ಯ ಕೇಂದ್ರ ಫರಂಗಿಪೇಟೆ ಇದರ ಸಂಯುಕ್ತ ಆಶ್ರಯದಲ್ಲಿ ಜರಗಿದ ಉಚಿತ ದಂತ ಭಾಗ್ಯ ಶಿಬಿರದ ಫಲಾನುಭವಿಗಳಿಗೆ ಸಂಪೂರ್ಣ ಉಚಿತ ದಂತ ಪಂಕ್ತಿ ವಿತರಣೆ ಮಾಡಿ ಮಾತನಾಡಿದರು .

IMG_3422news

   ಉತ್ತಮವಾದ ಆಹಾರ ಸೇವನೆ ಸಮರ್ಪಕವಾಗಿ ಆಗಬೇಕಿದ್ದರೆ ಆರೋಗ್ಯಪೂರ್ಣ ಹಲ್ಲುಗಳ ಪಾತ್ರ ಅತೀ ಮುಖ್ಯ, ಜನ ಸಾಮಾನ್ಯರೂ ಕೂಡ ಕೃತಕ ದಂತ ಪಂಕ್ತಿ ಜೋಡಣೆ ಮಾಡಲು ಎಲ್ಲಾ ರೀತಿಯ ಸಹಕಾರ ನೀಡುತ್ತಾ ಪರಿಸರದಲ್ಲಿ ಸಾಮಾಜಿಕ ಧಾರ್ಮಿಕ ಹಾಗು ಶೈಕ್ಷಣಿಕ ಸೇವೆಗೈಯುತ್ತಾ ನಿಜವಾದ ಅರ್ಥದಲ್ಲಿ ಸೇವೆಯಿಂದ ಸಾರ್ಥಕತೆ ಪಡೆಯುತ್ತಿರುವ ಸೇವಾಂಜಲಿ ಪ್ರತಿಷ್ಠಾನದ ಕೆಲಸ ಕಾರ್ಯಗಳು ಅನುಕರಣಾ ಯೋಗ್ಯ ಎಂದು ಬಂಟ್ವಾಳ ತಾಲೂಕು ಶಾಸಕರಾದ ಶ್ರೀ ಯು. ರಾಜೇಶ್ ನಾಯ್ಕ್ ಅವರು ನುಡಿದರು.
IMG_3442 news
     ಫರಂಗಿಪೇಟೆಯ ಸೇವಾಂಜಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಳ್ಲಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ಯು.ಟಿ.ಖಾದರ್, ಧರ್ಮದರ್ಶಿ ಅರ್ಕುಳ ಬೀಡು ಶ್ರೀ ವಜ್ರನಾಭ ಶೆಟ್ಟಿ, ಬಂಟ್ವಾಳ ರೋಟರಿ ಅಧ್ಯಕ್ಷ ಶ್ರೀ ಪ್ರಕಾಶ್ ಕಾರಂತ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಶ್ರೀ ಕೃಷ್ಣ ಕುಮಾರ್ ಪೂಂಜಾ, ಎ.ಬಿ. ಶೆಟ್ಟಿ ದಂತ ಮಹಾ ವಿದ್ಯಾಲಯದ ಪ್ರೊಫೆಸರ್ ಡಾ॥ಚೇತನ್ ಹೆಗ್ಡೆ, ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮುಖ್ಯ ದಂತ ಆರೋಗ್ಯಾಧಿಕಾರಿಗಳಾದ ಡಾ॥ ಅಂಬಿಕಾ ಜಿ. ಡಾ॥ ಲವೀನಾ ನೊರೊಹ್ನಾ, ಡಾ॥ ನಫೀಸಾ ಬಿ.ಬಂಟ್ವಾಳ ತಾಲೂಕು ಆಸ್ಪತ್ರೆಯ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ॥ ಪ್ರದೀಪ್ ಪೂಜಾರಿ ಕೆ. ಸೇವಾಂಜಲಿಯ ಟ್ರಸ್ಟಿ ಶ್ರೀ ದೇವದಾಸ್ ಶೆಟ್ಟಿ ಕೊಡ್ಮಾಣ್, ಶ್ರೀ ಕಂಪ ಸದಾನಂದ ಆಳ್ವ, ಸೇವಾಂಜಲಿ ಆರೋಗ್ಯ ಕೇಂದ್ರದ ಡಾ॥ರಂಜಿತ್ ಶೆಟ್ಟಿ, ಆರ್.ಎಸ್. ಜಯ ತುಂಬೆ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ರಮ್ಲಾನ್ , ಪ್ರಕಾಶ್ ಕಿದೆಬೆಟ್ಟು , ಉಮ್ಮರ್ ಫಾರೂಕ್ , ಭಾಸ್ಕರ್ ರೈ ಮತ್ತಿತರರು   ಉಪಸ್ಥಿತರಿದ್ದರು

ಸುಮಾರು 65 ಮಂದಿ ಫಲಾನುಭವಿಗಳು ಈ ಸಂದರ್ಭದಲ್ಲಿ ಉಚಿತ ದಂತ ಪಂಕ್ತಿ ಪಡೆದುಕೊಂಡರು

ಕೃಷ್ಣ ಕುಮಾರ್ ಪೂಂಜಾ ರವರು ಸ್ವಾಗತಿಸಿದರು , ತಾರಾನಾಥ ಕೊಟ್ಟಾರಿ ವಂದಿಸಿದರು ,ದೇವದಾಸ್ ಶೆಟ್ಟಿ ಕೊಡ್ಮಾಣ್  ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *