ಆಹಾರ ಬೆಳೆಯಾದ ಭತ್ತ ಬೆಳೆಯುವವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು ಎಂದು ಕರ್ಪೆ ಕುಂಭಕಂಠಿನಿ ಕೃಷಿಕರ ಸಂಘದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ನಾಯಕ್ ಕಿನ್ನಾಜೆ ಹೇಳಿದರು. ಅವರು ಕರ್ಪೆ ಪಾರ್ಲ ಕೃಷ್ಣ ಪ್ರಭುರವರ ಮನೆ ವಠಾರದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕುಂಭಕಂಠಿನಿ ಕೃಷಿಕರ ಸಂಘದ ನೇತ್ರತ್ವದಲ್ಲಿ ತನಗೆ ಸ್ವಂತ ಜಮೀನು ಇಲ್ಲದಿದ್ದರೂ ಗೇಣಿಗೆ ಕಳೆದ ನಾಲ್ಕು ವರ್ಷಗಳಿಂದ ಭತ್ತದ ಕೃಷಿಯನ್ನು ಮಾಡುತ್ತಿರುವ ಹಿರಿಯರಾದ ಶ್ರೀಮತಿ ಚಂದ್ರು ತಾರಬರಿ ರವರನ್ನು ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ನೇತ್ರಾವತಿ ಒಕ್ಕೂಟದ ಕಾರ್ಯಕಾರಿ ಸದಸ್ಯರಾದ ಶ್ರೀ ಶಿವರಾಯ ನಾಯಕ್ ಕರಿಮಲೆ, ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕ ರುದೇಶ್, ಕ್ಷೇತ್ರ ಮೇಲ್ವಿಚಾರಕಿ ಕುಮಾರಿ ಮೋಹಿನಿ, ಕುಂಭಕಂಠಿನಿ ಕೃಷಿಕರ ಸಂಘದ ಕಾರ್ಯದರ್ಶಿ ವಿದ್ಯಾಪ್ರಭು ಪಾರ್ಲ, ಕೋಶಾಧಿಕಾರಿ ಜನಾರ್ಧನ ಪೂಜಾರಿ ಕೆರ್ನಡೆ, ಉಪಾಧ್ಯಕ್ಷರಾದ ಸುರೇಂದ್ರ ಪೂಜಾರಿ ಕೋಡು, ಜತೆ ಕಾರ್ಯದರ್ಶಿ ಶ್ರೀಮತಿ ಜಯಂತಿ ಕಜೆಲಕ್ಕಿ, ನಿಕಟ ಪೂರ್ವ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಹಾಗೂ ಕುಂಭಕಂಠಿನಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

