ಬಂಟ್ವಾಳ: ಬಂಟ್ವಾಳ ತಾಲೂಕು ಸ್ರ್ತಿಶಕ್ತಿ ಒಕ್ಕೂಟ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2018-19 ಸಾಲಿನ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಡೈಸಿ ವರ್ಗೀಸ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ತಮ್ಮ ಶಕ್ತಿ , ಸಾಮರ್ಥ್ಯವನ್ನು ಸಂಘಟನೆಯ ಮೂಲಕ ಸದುಪಯೋಗ ಪಡೆದುಕೊಳ್ಳಬೇಕೆಂದರು.
ವಿಟ್ಲ ಸಿಡಿಪಿಒ ಸುಧಾಜೋಶಿ,ಮಾತನಾಡಿ ದ.ಕ.ಜಿಲ್ಲೆಯ ಎಲ್ಲಾ ಬ್ಲಾಕ್ ಸೊಸೈಟಿ ಗಳು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು , ಅಂತಹ ಚಟುವಟಿಕೆಗಳ ಮೂಲಕ ಸಂಘಟಿತರಾಗಿರುವ ಬಂಟ್ವಾಳ ಒಕ್ಕೂಟ ಜವಬ್ದಾರಿಯಿಂದ ಹೆಜ್ಜೆ ಇಡಬೇಕು ಎಂದು ಹೇಳಿದರು. ಬಂಟ್ವಾಳ ಸಿ.ಡಿ.ಪಿ.ಒ ಶ್ರೀಲತಾ,ಮಾತನಾಡಿ ಇಲಾಖೆಯ ಒಕ್ಕೂಟದ ಕಾರ್ಯಚಟುವಟಿಕೆಗಳಿಗೆ ಇಲಾಖೆಯಿಂದ ಸಹಕಾರ ನೀಡಲಾಗುವುದು ಎಂದರು. ಒಕ್ಕೂಟದ ಅಧ್ಯಕ್ಷೆ ರೇವತಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಬೇಬಿ, ಕಾರ್ಯದರ್ಶಿ ಪುಷ್ಪಲತಾ, ಕೋಶಾಧಿಕಾರಿ ಯಶೋಧ, ಸದಸ್ಯರಾದ ಪರಿದಾಭಾನು, ಸುನಂದ, ವಿಶಾಲಾಕ್ಷಿ, ನಾಗರತ್ನ, ಲಕ್ಮೀ, ಹಿರಿಯ ಮೇಲ್ವಿಚಾರಕಿಯರಾದ ಗಾಯತ್ರಿ ಕಂಬಳಿ, ಭಾರತಿಕುಂದರ್, ಮೇಲ್ವಿಚಾರಕಿ ಯರಾದ ಸಿಂದು, ಶಾಲಿನಿ, ಸುಜಾತ, ಗುಣವತಿ, ರೂಪಕಲಾ, ಸವಿತಾನವೀನ್ ಲೋಲಾಕ್ಷಿ, ರೋಹಿಣಿ, ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.ಎಸ್.ಎಲ್.ಸಿ.ಪಿಯುಸಿ, ಡಿಗ್ರಿ ಹಾಗೂ ಡಿಪ್ಲೋಮಾ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ಒಕ್ಕೂಟದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಒಕ್ಕೂಟದ ಸದಸ್ಯರಿಗೆ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆ ಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಒಕ್ಕೂಟದ ಕೋಶಾಧಿಕಾರಿ ಸ್ವಾಗತಿಸಿ , ಸದಸ್ಯೆ ಲಕ್ಷ್ಮಿ ವಂದಿಸಿದರು. ಕಾರ್ಯದರ್ಶಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು
