ಬಂಟ್ವಾಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಠ ರೋಗ ವಿಭಾಗ, ಜಿಲ್ಲಾ ಪಂಚಾಯತ್ ಮಂಗಳೂರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೈಕಂಬ ಇದರ ವತಿಯಿಂದ” ಉಚಿತ ಚರ್ಮ ರೋಗ ತಪಾಸಣಾ ಶಿಬಿರ “ಕೈಕಂಬದ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಬುಧವಾರ ನಡೆಯಿತು.
IMG-20191023-WA0024
 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧ್ಯಕ್ಷ ಸದಾಶಿವ ಬಂಗೇರ ಮನುಷ್ಯನ ಉನ್ನತ ಸಾಧನೆಗೆ ಆರೋಗ್ಯ ಬಹಳ ಮುಖ್ಯ. ಅರೋಗ್ಯ ವಂತ ಸಮಾಜದಿಂದ ಮಾತ್ರ ಈ ದೇಶ ಸಂಪತ್ಬರಿತವಾಗುತ್ತದೆ ಎಂದು  ಹೇಳಿದರು.
‘ಆರೋಗ್ಯವೇ ಭಾಗ್ಯ’ ಎಂಬ ನುಡಿಯಂತೆ  ಆರೋಗ್ಯದ  ಬಗ್ಗೆ ಉದಾಸೀನತೆ ಸಲ್ಲದು, ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ನುರಿತ ಸರಕಾರಿ  ವೈದ್ಯರ ತಪಾಸಣೆ ಮಾಡಿ ಎಂದ ಅವರು ಸರಕಾರಿ ಆಸ್ಪತ್ರೆಯ ಬಗ್ಗೆಯು ಕೀಳರಿಮೆ ಬೇಡ. ಸರಕಾರ ಹಮ್ಮಿಕೊಂಡಿರುವ  ಉಚಿತ ತಪಾಸಣಾ ಶಿಬಿರದ ಪ್ರಯೋಜನ ವನ್ನು ಪ್ರತಿಯೊಬ್ಬರು ಪಡೆದುಕೊಳ್ಳಿ ಎಂದರು.
ಈ ಕೇಂದ್ರ ವನ್ನು ಬೇರೆ ಕಡೆಗೆ ವರ್ಗಾಯಿಸುವ ಸಂದರ್ಭದಲ್ಲಿ ವಿಶೇಷ ಮುತುವರ್ಜಿ ವಹಿಸಿ ಜನರ ಪ್ರಯೋಜನಕ್ಕಾಗಿ ಮತ್ತು  ಬೇಡಿಕೆಗೆ ಅನುಗುಣವಾಗಿ ಇಲ್ಲೇ  ಮತ್ತೆ  ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆವೆ ಎಂದರು, .
ವೆನ್ಲಾಕ್ ಆಸ್ಪತ್ರೆಯ ಎಂ.ಡಿ ನವೀನ್, ಡಾ. ಮಾತನಾಡಿ ಚರ್ಮರೋಗದಂತ ಅನೇಕ ರೋಗಗಳು ಸ್ವಚ್ಚತೆಯಿಲ್ಲದ ಕಾರಣಗಳಿಂದ ಬರುತ್ತಿದೆ, ಹಾಗಾಗಿ ಪರಿಸರದಲ್ಲಿ ಸ್ಚಚ್ಚತೆಗೆ ಹೆಚ್ಚಿನ ಗಮನಹರಿಸಿ ಎಂದರು.
ಕುಷ್ಟ ರೋಗದ ಬಗ್ಗೆ ಮಾಹಿತಿ ನೀಡಿದ ಅವರು ಯಾವುದೇ ಸಂಶಯಗಳು ಬಂದಾಗ ಸ್ಥಳೀಯ ಸರಕಾರಿ ಆಸ್ಪತ್ರೆ ಯ ವೈದ್ಯಾಧಿಕಾರಿ ಯವರನ್ನು ಭೇಟಿಯಾಗಿ ತಪಾಸಣೆ ನಡೆಸುವಂತೆ ಸಲಹೆ ನೀಡಿದರು.
 ಕುಷ್ಟರೋಗ ತಜ್ಞ ವಿಜಯ್ ಅವರು ಉಪಸ್ಥಿತರಿದ್ದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ವಾಣಿಶ್ರೀ ಪ್ರಾಸ್ತಾವನೆಗೈದರು.ಆಶಾ ಕಾರ್ಯಕರ್ತೆ ಮೀನಾಕ್ಷಿ ಸ್ವಾಗತಿಸಿದರು.ಆಶಾ ಕಾರ್ಯಕರ್ತೆ ಮಂಜುಳಾ ವಂದಿಸಿದರು.

By suddi9

Leave a Reply

Your email address will not be published. Required fields are marked *