Published On: Wed, Oct 16th, 2019

ಮಂಗಳೂರಿನಲ್ಲಿ “ಸವರ್ಣದೀರ್ಘಸಂಧಿ”

 ಮಂಗಳೂರು: ತುಳು ಸಿನಿಮಾ ’ಚಾಲಿಪೋಲಿಲು’ ಖ್ಯಾತಿಯ ನಿರ್ದೇಶಕ ವೀರೇಂದ್ರ ಶೆಟ್ಟಿ ನಿರ್ದೇಶಿಸಿ, ನಟಿಸಿರುವ  “ಸವರ್ಣದೀರ್ಘಸಂಧಿ” ಸಿನಿಮಾದಲ್ಲಿ ಹಿರಿಯ ನಟಿ ವಿನಯಪ್ರಸಾದ್ ಅವರ ಸಹೋದರನ ಮಗಳು ಕೃಷ್ಣಾ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

d9cdac69-97a8-4849-99b7-7edbf683af66
ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ (ಪಿವಿಆರ್), ಮನೋಮೂರ್ತಿ, ವೀರೇಂದ್ರ ಶೆಟ್ಟಿ ಸೇರಿದಂತೆ ನಾಲ್ಕು ಜನ ನಿರ್ಮಾಪಕರನ್ನು ಹೊಂದಿರುವ ಈ ಸಿನಿಮಾಗೆ ಮನೋಮೂರ್ತಿ ಸಂಗೀತವಿದೆ. ಶಂಕರ್ ಮಹದೇವನ್, ಶ್ರೇಯಾ ಘೋಷಾಲ್ , ಶಶಿಕಲಾ ಸುನೀಲ್, ವಿಧಿಷಾ ವಿಶ್ವಾಸ್ ಹಿನ್ನೆಲೆ ಗಾಯನ ಈ ಚಿತ್ರಕ್ಕಿದೆ.
ಉಸ್ತಾದ್ ಹೋಟೆಲ್ ಖ್ಯಾತಿಯ ಛಾಯಾಗ್ರಾಹಕ ಲೋಗನಾಥನ್ ಶ್ರೀನಿವಾಸನ್ ಕ್ಯಾಮಾರ ಈ ಸಿನಿಮಾಕ್ಕಿದೆ. ಸಂಕೇತ್ ಶಿವಪ್ಪ ಸಂಕಲನ ಮಾಡಿದ್ದಾರೆ. ಬೆಂಗಳೂರಿನ ಪ್ರಸಿದ್ಧ  ಸ್ಥಳಗಳಲ್ಲಿ  ಆನೇಕಲ್, ಜಿಗಣಿ, ದೇವರಾಯನ ದುರ್ಗಾ, ಮೂಡಿಗೆರೆ  ಆಸುಪಾಸಿನಲ್ಲಿ  ಚಿತ್ರೀಕರಣ ಮಾಡಲಾಗಿದೆ.
ಕಾವೂರು  ವೀರೇಂದ್ರ ಶೆಟ್ಟಿ, ಕೃಷ್ಣಾ, ರವಿಭಟ್, ಕೃಷ್ಣ ನಾಡಿಗ್, ಪದ್ಮಜ ಸುರೇಂದ್ರ ಬಂಟ್ವಾಳ, ನಿರಂಜನ್ ದೇಶಪಾಂಡೆ, ರವಿ ಮಂಡ್ಯ, ಅಜಿತ್ ಹನಮಕ್ಕನವರ್ , ಅಲ್ವಿನ್ ಸಚಿನ್ ಡಿಸೋಜ, ಅವಿನಾಶ್ ನೀನಾಸಂ, ದತ್ತಾತ್ರೇಯ ಕುರಹಟ್ಟಿ, ರಾಮರಾವ್, ಸಂಕೇತ್ ಶಿವಪ್ಪ, ಪ್ರಣವ್ ಮೂರ್ತಿ, ಅಪ್ರಮೆಯ, ರಾಘು ಕಲಾವಿದ, ವಿಕ್ಕಿ, ಮಧುಸೂದನ್, ಮಧು ಭಾರದ್ವಾಜ್, ಎಲಿಜಬೆತ್ ಥಾಮಸ್ ಮುಂತಾದವರು ತಾರಾಗಣದಲ್ಲಿದ್ದಾರೆ. ನಿರ್ದೇಶನ-ಕಥೆ-ಚಿತ್ರಕಥೆ-

ಸಂಭಾಷಣೆ:  ಮಂಗಳೂರಿನ ಯುವಕ ವೀರೇಂದ್ರ ಶೆಟ್ಟಿ ಕಾವೂರು.

ಮಂಗಳೂರಿನಲ್ಲಿ ನಡೆದ “ಸವರ್ಣದೀರ್ಘಸಂಧಿ” ಪ್ರೀಮಿಯರ್ ನೋಡಿ ಫುಲ್‍ಖುಷ್ ಆದ್ರಾ ಪ್ರೇಕ್ಷಕರು

ಬ್ಲ್ಯಾಕ್ ಕಾಮಿಡಿಗೆ ಮನಸೋತ ಪ್ರೇಕ್ಷಕ ಮಹಾಪ್ರಭು

ಮೊದಲ ಸಿನೆಮಾದಲ್ಲೇ ಭರವಸೆಯ ನಟಿಯಾದ “ಕೃಷ್ಣಾ”

ನಿರ್ದೇಶನಕ್ಕೂ ನಟನೆಗೂ ಸೈ ಎಂದ ವಿರೇಂದ್ರ ಶೆಟ್ಟಿ

ಇದು ಸುವರ್ಣ ಅಲ್ಲ ಸವರ್ಣದೀರ್ಘಸಂಧಿ ಕಣ್ರೀ..!!

 ಕೃಪೆ: ರಿಪೋರ್ಟರ್‌ 

http://www.suddi9.com/?p=125012

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter