ಬಂಟ್ವಾಳ: ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಮನೋಭಾವನೆ ಮತ್ತು ಮನಸ್ಥಿತಿಗಳಲ್ಲಿ ಸ್ಥಿತ್ಯಂತರ ಉಂಟಾಗಿದ್ದು ಪೋಷಕರು ತಮ್ಮ ದಿನನಿತ್ಯದ ಬದುಕಿನಲ್ಲಿ ಕೆಲ ಸಮಯವನ್ನಾದರೂ ಮಕ್ಕಳಿಗೆ ಮೀಸಲಿಡಬೇಕು,ತಾಳ್ಮೆ, ಸಹನೆ, ಕಾಳಜಿಯಿಂದ ಮಕ್ಕಳನ್ನು ಬೆಳೆಸಿದಾಗ ಸಂಸ್ಕಾರವಂತ ನಾಗರಿಕರನ್ನು ರೂಪಿಸಲು ಸಾಧ್ಯ” ಎಂದು ಶ್ರೀ, ಧರ್ಮಸ್ಥಳ ಮಂಜುನಾಥ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮೋಹನ್ ನಾರಾಯಣ್ ಕೆ.ಎಸ್.ಹೇಳಿದರು.
ಅವರು ವಾಮದಪದವು ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಹಾಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶಿಕ್ಷಕ ರಕ್ಷಕ ಸಂಘದ ಸಂಚಾಲಕರಾದ ಪ್ರೊ. ಚಂದ್ರಕಾಂತ ಶೆಣೈ ಮತ್ತು ಡಾ, ಮೇರಿ ಎಂ,ಜೆ. ಹಾಜರಿದ್ದರು. . ಇತಿಹಾಸ ವಿಭಾಗದ ಪ್ರೊ. ಕೃಷ್ಣಮೂರ್ತಿ ಎನ್.ಬಿ. ಕಾರ್ಯಕ್ರಮ ನಿರೂಪಿಸಿದರು.ಈ ಶೈಕ್ಷಣಿಕ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಮೋಹನ್‌ದಾಸ್ ಗಟ್ಟಿ (ಅಧ್ಯಕ್ಷರುು), ಸುಂದರ ಗೌಡ ( ಉಪಾಧ್ಯಕ್ಷರು), ಜಯಕುಮಾರ (ಕಾರ್ಯದರ್ಶಿ), ಸುಗಂಧಿ (ಜೊತೆ ಕಾರ್ಯದರ್ಶಿ), ಅಬ್ದುಲ್ ಬಶೀರ್(ಖಜಾಂಚಿ) ರವರು ಅವಿರೋಧವಾಗಿ ಆಯ್ಕೆಯಾದರು. ಅದಲ್ಲದೆ ೦೭ ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
