ಮಳೆಯಿಂದಾಗಿ ಹಾನಿಗೀಡಾದ ರಸ್ತೆಗಳನ್ನು ಶೀಘ್ರ ವಾಗಿ ಪುನರ್ ನಿರ್ಮಿಸಲಾಗುವುದು  : ರವೀಂದ್ರ ಕಂಬಳಿ 
ತೀವ್ರ ವಾದ ಮಳೆ ಹಾಗು ನಿರ್ವಹಣಾ ಕೊರತೆ ಯಿಂದ ತೀರಾ ನಾದುರಸ್ತಿ ಯಲ್ಲಿದ್ದ  ಕೊಟ್ಟಿಂಜ – ಕೊಡ್ಮಾಣ್ ಸಂಪರ್ಕ ರಸ್ತೆ ಗೆ ಸಂಸದ ನಳಿನ್ ಕುಮಾರ ಕಟೀಲು ರವರ ಅನುದಾನ 5 ಲಕ್ಷ ,ಜಿಲ್ಲಾ ಪಂಚಾಯತ್ ಸದಸ್ಯ ಅನುದಾನ 2ಲಕ್ಷ  ,  ತಾಲೂಕು ಪಂಚಾಯತ್ ಸದಸ್ಯಗಣೇಶ್ ಸುವರ್ಣ ರ ಅನುದಾನ1 ಲಕ್ಷ  ಮತ್ತು ಮೇರಮಜಲು ಪಂಚಾಯತ್ ಅನುದಾನ 1ಲಕ್ಷ ಒಟ್ಟು 9 ಲಕ್ಷ ರೂಪಾಯಿಗಳಿಂದ  ಕಾಂಕ್ರೀಟಿಕರಣ ಗೊಳಿಸಿದ   ರಸ್ತೆ ಯನ್ನು ಉದ್ಘಾಟನೆ ಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ   ರವೀಂದ್ರ ಕಂಬಳಿಯವರು  ಮುಂದಿನ  ದಿನಗಳಲ್ಲಿ  ಮಳೆಯಿಂದಾಗಿ ಹಾನಿಗೀಡಾದ ರಸ್ತೆಗಳನ್ನು ಶೀಘ್ರ ವಾಗಿ ಕಾಂಕ್ರೀಟಿಕರಣ ಗೊಳಿಸಿ  ಶಾಶ್ವತ ಪರಿಹಾರ ಮಾಡಲಾಗುವುದು ಎಂದರು .
news
 ಈ ಸಂದರ್ಭ ದಲ್ಲಿ  ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಮೇರಮಜಲು ಪಂಚಾಯತ್ ಅಧ್ಯಕ್ಷ ಸತೀಶ್ ನಾಯ್ಗ, ಮಾಜಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷೆ  ಶೈಲಜಾ ಪಿ ಶೆಟ್ಟಿ ,  ಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿ , ಮಂಗಳೂರು ಮಂಡಲ  ಬಿ ಜೆ ಪಿ ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ ,ಬಿ ಜೆ ಪಿ  ಕೊಟ್ಟಿಂಜ ಬೂತ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಕೊಟ್ಟಿಂಜ , ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ ಕೊಟ್ಟಿಂಜ , ಗುತ್ತಿಗೆದಾರರಾದ ದಿನೇಶ್ ರೈ ಕುಪ್ಪಿಲ  , ಲೋಕನಾಥ್ ಆಚಾರ್ಯ  , ಸಂತೋಷ್ ಕುಮಾರ್   ಕೊಡ್ಮಾಣ್ , ಕಾಂತಪ್ಪ  ಕುಲಾಲ್ ಕೊಳಂಬೆ , ಜಯಂತಿ ಸಿ ಶೆಟ್ಟ್ಟಿಕೊಟ್ಟಿಂಜ , ರಾಮಚಂದ್ರ ಆಳ್ವ ದೆಕ್ಕೆದು, ರಮೇಶ್ ಶೆಟ್ಟಿ ಕೊಟ್ಟಿಂಜ ಸಂತೋಷ್ ಎನ್  ಶೆಟ್ಟಿ ಕೊಟ್ಟಿಂಜ, ಭಾಸ್ಕರ  ಬಂಗೇರ ಕೊಳಂಬೆ ,   ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *