ಬಂಟ್ವಾಳ: ಮಂಜೇಶ್ವರ ಉಪಚುನಾವಣೆಯ ಹಿನ್ನಲೆಯಲ್ಲಿ ಯುಡಿಎಫ್ ಅಭ್ಯರ್ಥಿ ಎಂ ಸಿ ಕಮರುದ್ದೀನ್ ಪರ ಮಾಜಿ ಸಚಿವರಾದ ಶ್ ಬಿ ರಮಾನಾಥ ರೈ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರ ನಿಯೋಗ ವಿವಿಧೆಡೆಲ್ಲಿ ಮತಯಾಚನೆ ಗೈದರು. ಮಂಜೇಶ್ವರ ವಿಧಾನದಭಾ ಕ್ಷೇತ್ರ ವ್ಯಾಪ್ತಿಯ ಬಾಯರ್. ಚಿಪ್ಪರ್. ಕುರುಡಪದವು. ಸಿರಂತಡ್ಕ. ಸುಂಕದಕಟ್ಟೆಯಲ್ಲಿ ಬಿರುಸಿನ ಪ್ರಚಾರ ಮಾಡಿದರು.
ಈ ಸಂದರ್ಭದಲ್ಲಿ ಕೋಟಕಲ್ ಶಾಸಕರಾದ ಸೈಯದ್ ಅಬಿದ್ ಉಸೇನ್ ತಂಗಳ್ , ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮೊಹಮ್ಮದ್. ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ. ಚಂದ್ರಶೇಖರ್ ಬಾಳ್ತಿಲ ಮತ್ತು ಯುಡಿಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.
