ಬಂಟ್ವಾಳ:  ನುರಿತ ತಜ್ಞ  ವೈದ್ಯಾಧಿಕಾರಿಗಳನ್ನು ಗ್ರಾಮೀಣ ಪ್ರದೇಶಕ್ಕೆ  ಕರೆಸಿ  ಅವರ ಮೂಲಕ ಗ್ರಾಮೀಣ ಭಾಗದ ಜನರಿಗೆ  ಉಚಿತ  ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ  ನೀಡುವ ಕಾರ್ಯ ಶ್ಲಾಘನೀಯವಾಗಿದೆ  ಎಂದು  ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಜಿ ಶಾಲಾ ಮುಖ್ಯ ಶಿಕ್ಷಕ  ನಾರಾಯಣ ಪೂಜಾರಿ ಹೇಳಿದ್ದಾರೆ. ಅವರು ಸ್ವಸ್ತಿಕ್ ಫ್ರೆಂಡ್ಸ್ ಗಣೇಶ್ ಗೋಡಿ ,ಅಂಕ ಧಡ್ಕ, ವೀರಕಂಬ ಇದರ ಆಶ್ರಯದಲ್ಲಿ  ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ     ಕೆ. ಎಂ. ಸಿ .ಆಸ್ಪತ್ರೆ ಅತ್ತಾವರ ಇವರ ಸಹಕಾರದಲ್ಲಿ ಭಾನುವಾರ ನಡೆದ  ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು  ಮಾತನಾಡಿದರು.
IMG-20191013-WA0060
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ  ಸಂಜೀವ ಮೂಲ್ಯ ವಹಿಸಿದ್ದರು.         ಕೆ ಎಂ ಸಿ ಆಸ್ಪತ್ರೆಯ  ಪಿಆರ್ ಒ ಹರ್ಬಿಟ್ ಮರಿಯೂ ಪಿರೇರಾ ಶಿಬಿರದ  ಬಗ್ಗೆ ವಿವರಿಸಿದರು .
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ  ಗೀತಾ ಚಂದ್ರಶೇಖರ್, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ  ಪ್ರೇಮಲತಾ, ಮಣಿಪಾಲ ಡೆಂಟಲ್ ಸಯನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾಕ್ಟರ್ ಮೃಣಾಲಿನಿ ಶೆಟ್ಟಿ ,ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾಮಾನ್ಯ  ರೋಗ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಸ್ತ್ರೀರೋಗ ತಜ್ಞರು ,ಕಣ್ಣಿನ ತಜ್ಞರು ,ಕಿವಿ ಮೂಗು ಮತ್ತು ಗಂಟಲು ತಜ್ಞರು, ಮಕ್ಕಳ ರೋಗ ತಜ್ಞರು, ಹಾಗೂ ದಂತ ಚಿಕಿತ್ಸಾ ತಜ್ಞರು ಭಾಗವಹಿಸಿದ್ದರು.          ಈ ಸಂದರ್ಭದಲ್ಲಿ ಅಗತ್ಯ ಫಲಾನುಭವಿಗಳಿಗೆ ಉಚಿತ ಕನ್ನಡಕ ಹಾಗೂ ಔಷಧಿಯನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಂಘಟಕರಾದ ಸ್ವಸ್ತಿಕ್ ಫ್ರೆಂಡ್ಸ್ ಗಣೇಶ್ ಕೋಡಿ ಅಂಕ ಧಡ್ಕ ವೀರಕಂಬ ಇದರ ಅಧ್ಯಕ್ಷ ಮೋಹನ್ ದಾಸ್ ಸ್ವಾಗತಿಸಿ ಕಾರ್ಯದರ್ಶಿ ವಿಘ್ನೇಶ ಆಚಾರ್ಯ ವಂದಿಸಿದರು. ರವೀಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *