ಬಂಟ್ವಾಳ:ಇಲ್ಲಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 17ನೇ ವರ್ಷ ಪೂಜಿಸಲಾದ ಶಾರದಾ ಮೂರ್ತಿಯನ್ನು ಮಂಗಳವಾರ ರಾತ್ರಿ ಸಂಭ್ರಮ ಸಡಗರದಿಂದ ನಡೆದ ಆಕರ್ಷಕ ಶೋಭಾಯಾತ್ರೆ ಬಳಿಕ ಕುದ್ಮಾಣಿ ಹೊಳೆಯಲ್ಲಿ ಜಲಸ್ತಂಭನ ಮೂಲಕ ಸಮಾರೋಪಗೊಂಡಿತು.

9btl-Koila
ಮಾವಂತೂರು ರಾಜಾರಾಮ ಭಟ್ ಮತ್ತು ಹರೀಶ ಭಟ್ ದೈಲ ಇವರ ಪೌರೋಹಿತ್ಯದಲ್ಲಿ ಶಾರದಾ ಮಾತೆಗೆ ವಿಶೀಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ಬಳಿಕ ಅಣ್ಣಳಿಕೆ-ರಾಯಿ ರಸ್ತೆ ನಡುವೆ ಆಕರ್ಷಕ ಶೋಭಾಯಾತ್ರೆ ನಡೆಯಿತು. ಚೆಂಡೆ, ಕೊಂಬು, ವಾದ್ಯ, ಸಂಚಾರಿ ರಸಮಂಜರಿ, ನಾಸಿಕ್ ಬ್ಯಾಂಡ್, ಶಿವಾಜಿ ಸ್ತಬ್ಧಚಿತ್ರ, ಚಿಲಿಪಿಲಿ ಗೊಂಬೆ ಬಳಗ, ಭಜನೆ, ಸುಡುಮದ್ದು ಪ್ರದರ್ಶನ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿತು. ಮಂಗಳವಾರ ತಡರಾತ್ರಿ ಕುದ್ಮಾಣಿ ಹೊಳೆಯಲ್ಲಿ ಶಾರದಾ ಮೂರ್ತಿ ಜಲಸ್ತಂಭನಗೊಳಿಸಲಾಯಿತು.
ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಮಿತಿ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ, ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಡೊಂಬಯ ಬಿ.ಅರಳ, ಹರೀಶ ಪೂಜಾರಿ ಬಾಡಬೆಟ್ಟು, ಉಮೇಶ ಡಿ.ಎಂ., ಅಜಿತ್ ಕುಮಾರ್, ಸದಾನಂದ ಗೌಡ, ಸತೀಶ ಬಾಡಬೆಟ್ಟು, ಮನೋಹರ ಕೊಯಿಲ, ರಮಾನಾಥ ರಾಯಿ, ಸಂತೋಷ್ ಕುಮಾರ್ ಬೆಟ್ಟು, ವಿಶ್ವನಾಥ ಗೌಡ, ಶರತ್ ಕುಮಾರ್, ಪ್ರಸನ್ನ ಕುಮಾರ್ ಶೆಟ್ಟಿ, ಬಾಬು ಪ್ರಶಾಂತ ಶೆಟ್ಟಿ, ದಿನೇಶ ಸುವರ್ಣ, ಉಮೇಶ ಹೋರಂಗಳ, ಸಂತೋಷ್ ಅಂಚನ್, ರಾಜೇಶ ಜೈನ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *