ಕೈಕಂಬ :ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕದಿಮಿ ತಂಡ(ರಿ)ಶ್ರೀ ರಾಮ್ ಸಭಾಂಗಣ ಗುರುಪುರ ಕೈಕಂಬ ಮತ್ತು ಶ್ರೀ ಸುಬ್ರಹ್ಮಣ್ಯ ಕಲಾ ಆಟ್ಸ್ ಇದರ ಆಶ್ರಯದಲ್ಲಿ ಗುರುಪುರ ಕೈಕಂಬ ಪರಿಸರದಲ್ಲಿ ಕಸಮುಕ್ತ, ಪ್ಲಾಸ್ಟಿಕ್ ಮುಕ್ತ ಸ್ವಚ್ಚತಾ ಕಾರ್ಯಕ್ರಮ ಅ.8 ಮಂಗಳವಾರ ನಡೆಯಿತು.
ಕೈಕಂಬ ಶ್ರೀರಾಮ್ ಹೋಟೆಲ್ ಮಾಲಕ ಹರಿರಾವ್, ಶ್ರೀನಿವಾಸ ಎಂಟರ್ ಪ್ರೈಸಸ್ ಕೈಕಂಬ ಇದರ ಮಾಲಕ ಶ್ರೀಧರ್ ರಾವ್, ಅಶಿತ್ ಎಂಟರ್ ಪ್ರೈಸಸ್ ಕೈಕಂಬ ರಾಜೀವ ಕೆ.ಕೈಕಂಬ ಚಾಲನೆ ನೀಡಿದರು. ತಕದಿಮಿತ ತಂಡದ ಗೌರವ ಸಲಹೆಗಾರರಾದ ಉಮೇಶ್ ಆರ್ ಭಂಡಾರಿ ಕೈಕಂಬ ಮತ್ತು ಉಪಾದ್ಯಕ್ಷರಾದ ಲತಾ ಕುಮಾರ್ ಹಾಗೂ ತಂಡದ ಸಂಚಾಲಕರಾದ ಪುಷ್ಪರಾಜ್ ಕೆ. ಉಪಸ್ಥಿತರಿದ್ದರು.
ಹಾಗೂ ತಂಡದ ಎಲ್ಲಾ ವಿದ್ಯಾರ್ಥಿಗಳು,ಹೆತ್ತವರು ಹಾಗೂ ತಂಡದ ಊರ ಹಿತೈಸಿಗಳು ನಮ್ಮೊಂದಿಗೆ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

