ಉಡುಪಿ:  ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್, ಹಾಗೂ ಪಂಚರತ್ನ ಸೇವಾ ಟ್ರಸ್ಟ್ ಇವರಿಂದ  ಹಳೆ ದಾಸ್ತಾನು ಬಟ್ಟೆಗಳಿಗೆ ಮರುಜೀವ ನೀಡುವ 10ನೇ ಹಂತದ ಕಾರ್ಯಕ್ರಮವು ಮಾರುಥಿ ವಿಥಿಕಾ ಇಲ್ಲಿರುವ ಟ್ರಸ್ಟಿನ ಜನ ಸಂಪರ್ಕ ಕಛೇರಿಯಲ್ಲಿ ನಡೆಯಿತು.
IMG-20191010-WA0023
ತುಮಕೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಶಾರದಾಂಬ ನಿರಾಶ್ರಿತರ ಆಶ್ರಯಧಾಮ ಇಲ್ಲಿ ಆಶ್ರಯ ಪಡೆದಿರುವ ಆಶ್ರಮವಾಸಿಗಳ ಬಳಕೆಗೆ ಮಹಿಳೆಯರ ಮತ್ತು ಪುರುಷರ ಉಡುಪುಗಳನ್ನು ನೀಡಲಾಯಿತು. ಬಟ್ಟೆಗಳನ್ನು ಆಶ್ರಮ ಪರಿಚಾರಕರಾದ ಮಣಿಕಠ, ಆಶಾ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯ ತಾರಾನಾಥ್ ಮೇಸ್ತ ಶಿರೂರು ಹಾಗೂ ಪಂಚರತ್ನ ಸೇವಾ ಟ್ರಸ್ಟಿನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು ಉಪಸ್ಥಿತರಿದ್ದರು.
 IMG-20191010-WA0025

By suddi9

Leave a Reply

Your email address will not be published. Required fields are marked *