ಬಂಟ್ವಾಳ :ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವತಿಯಿಂದ ಸಂವೇದನಾಶೀಲ ಸ್ಥಳ ಭೇಟಿ ಎಂಬ ಕಾರ್ಯಕ್ರಮದ ಅಂಗವಾಗಿ ಕನ್ಯಾನ ಭಾರತ್ ಸೇವಾಶ್ರಮಕ್ಕೆ ಭೇಟಿ ನೀಡಲಾಯಿತು.

ಯುವಮನಸ್ಕರಲ್ಲಿ ತಂದೆ ತಾಯಿಗಳೊಂದಿಗೆ ಪ್ರೀತಿ, ವಾತ್ಸಲ್ಯ, ಬಾಂಧವ್ಯವನ್ನು ವೃದ್ಧಿಸುವುದು. ಹೆತ್ತವರು ಹೊರೆಯಲ್ಲ ಎಂಬ ಭಾವನೆ ಮೂಡಿಸುವುದರ ಜೊತೆಗೆ ಹಿರಿಯರನ್ನು ಅಮಾನವೀಯವಾಗಿ ಆಶ್ರಮಕ್ಕೆ ತಳ್ಳುವುದು ಕಡಿಮೆಯಾಗಬೇಕು ಎಂಬುವುದು ಈ ಕಾರ್ಯಕ್ರಮದ ಉದ್ದೇಶ.
ಕನ್ಯಾನ ಭಾರತ್ ಸೇವಾಶ್ರಮದ ಸಂಚಾಲಕ ಈಶ್ವರ ಭಟ್ ಹಾಗೂ ಸ್ಥಳೀಯ ನಿವಾಸಿ ಪರಶುರಾಮ ಆಶ್ರಮದ ಹುಟ್ಟು ಮತ್ತು ಬೆಳವಣೆಗೆಗಳ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರು ಆಶ್ರಮದಲ್ಲಿ ಶ್ರಮದಾನವನ್ನು ನಡೆಸಿಕೊಟ್ಟರು. ಆಶ್ರಮ ನಿವಾಸಿಗಳೊಂದಿಗೆ ಸುಖ-ಕ್ಷೇಮ ವಿಚಾರಣೆ ಹಾಗೂ ಹಿರಿಯರನ್ನು ತಮ್ಮ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಮನರಂಜಿಸಿದರು. ಅಲ್ಲಿಯ ಹಿರಿಯರು ಅವರ ಕಲಾಪ್ರತಿಭೆಯನ್ನು ಮುಗ್ಧತೆಯೊಂದಿಗೆ ಮುಕ್ತವಾಗಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ೧೦೫ ವಿದ್ಯಾರ್ಥಿಗಳು, ಯೋಜನಾಧಿಕಾರಿ ಹರೀಶ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
